ರಾಮದುರ್ಗದಲ್ಲಿ ಕಾರ್ಮಿಕರ ದಿನಾಚರಣೆ..!

Mon, May 01, 2023

ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಕಾರ್ಮಿಕ ದಿನಾಚರಣೆಯನ್ನು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ ರಾಮದುರ್ಗದ ವತಿಯಿಂದ  ಆಚರಿಸಲಾಯಿತು...


ಪಟ್ಟಣದ ತೇರ್ ಬಜಾರ್ ನಿಂದ ಪ್ರಾರಂಭವಾದ ಮೆರವಣಿಗೆಯು ಕಾರ್ಮಿಕ ಪರ ಘೋಷಣೆಗಳನ್ನು ಕೂಗುತ್ತ ಪಟ್ಟಣದ ಸರಸ್ವತಿ ಕಲ್ಯಾಣ ಮಂಟಪಕ್ಕೆ ಬಂದು ತಲುಪಿತು , ತದನಂತರ ಇತ್ತೀಚಿಗೆ ನಿಧನರಾದ ಕಾರ್ಮಿಕರಿಗೆ ಆಸರೆಯಾದ, ದುಡಿಯುವ ಕೈಗಳಿಗೆ ಬಲ ನೀಡಿದ, ರೈತಪರ ಧ್ವನಿ ಎತ್ತಿದ,  ಜನರ ಪರ ಹೋರಾಟ ಮಾಡಿದ ಧೀಮಂತ ನಾಯಕ ಕಾಮ್ರೆಡ್ ವಿ ಪಿ ಕುಲಕರ್ಣಿ ಇವರಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಶ್ರದ್ಧಾಂಜಲಿಯನ್ನು ಕುಟುಂಬಸ್ಥರು, ಮುಖಂಡರಿಂದ ಹಾಗೂ ಕಾರ್ಮಿಕರಿಂದ  ಸಲ್ಲಿಸಲಾಯಿತು...

ಈ ಸಂಧರ್ಭ citu ಧ್ವಜವನ್ನು Citu  ತಾಲೂಕಾ ಅಧ್ಯಕ್ಷರು ನಾಗಪ್ಪ ಸಂಗೊಳ್ಳಿ ನೆರೆವೇರಿಸಿದರು , ಮಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತರಿಗೆ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ಈ ಸಂಧರ್ಭದಲ್ಲಿ Citu ಜಿಲ್ಲಾ ಕಾರ್ಯದರ್ಶಿ ಗೈಬುಸಾಬ ಜೈನೆಖಾನ್, ತಾಲೂಕಾ ಅಧ್ಯಕ್ಷರು ನಾಗಪ್ಪ ಸಂಗೊಳ್ಳಿ, ಪ್ರೊ ಚಿಕ್ಕನರಗುಂದ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ, ಡಬ್ಬಾ ಅಂಗಡಿಕರಾರ ಸಂಘ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ, ಬಿಡಿ ಕಾರ್ಮಿಕ ಸಂಘ ಸರ್ವ ಸದಸ್ಯರು ಉಪಸ್ಥಿತರಿದ್ದರು

ವರದಿ: ನೂರಮಹ್ಮದ ಅಕ್ಕೋಜಿ...

Like our news?