ರಾಮದುರ್ಗ ಪಟ್ಟಣದಲ್ಲಿ ಬಸವನಗೌಡ ಪಾಟೀಲ (ಯತ್ನಾಳ) ಬೃಹತ್ ರೋಡ್ ಶೋ..!

Sun, Apr 30, 2023

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ "ಬೃಹತ್ ರೋಡ್ ಶೋ" ನಡೆಯಿತು...


ರಾಮದುರ್ಗ ಪಟ್ಟಣದ ಹುತಾತ್ಮ ಸರ್ಕಲನ ಸರಕಾರಿ ಆಸ್ಪತ್ರೆ  ಹತ್ತಿರದಿಂದ ಪ್ರಾರಂಭವಾದ ಬೃಹತ್ ರೋಡ್ ಶೋ ಡಾ. ಬಿ ಆರ್ ಅಂಬೇಡ್ಕರ್ ಮಾರ್ಗವಾಗಿ ಆರೀಬೆಂಚಿ ಪಂಪಗೆ ಬಂದು ಮುಕ್ತಾಯಗೊಂಡಿತು... ಈ ರೋಡ್ ಶೋ ದಲ್ಲಿ ವಿಜಯಪುರ ನಗರ ಮಾಜಿ ಶಾಸಕ ಬಸವನಗೌಡ  ಪಾಟೀಲ (ಯತ್ನಾಳ) ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಭಾಗಿಯಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು...

ರಾಮದುರ್ಗ ವಿಧಾನಸಭಾ ಮತಕ್ಷೇತ್ರ  ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಚಿಕ್ಕರೇವಣ್ಣ ಪರ ಪ್ರಚಾರ ನಡೆಸಿ ಮತಯಾಚಿಸಿದರು...

ಈ ಸಂಧರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ತಾಲ್ಲೂಕು ಅಧ್ಯಕ್ಷ ರಾಜೇಶ್ ಬೀಳಗಿ, P F ಪಾಟೀಲ್, ಕೆ ವಿ  ಪಾಟೀಲ್, ರೇಖಾ ಚಿನ್ನಾಕಟ್ಟಿ, ರೇನಪ್ಪ ಸೋಮಗೊಂಡ, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗಿಯಾಗಿದ್ದರು...

ವರದಿ : ನೊರಮಹ್ಮದ ಅಕ್ಕೋಜಿ ರಾಮದುರ್ಗ..!

Like our news?