ಬೆಳಗಾವಿ : ರಾಮದುರ್ಗ ತಾಲೂಕಿನ ಕಡಕೋಳ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿ ಚುನಾವಣೆ ಪ್ರಚಾರ ಸಮಾವೇಶ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ನೀರಾವರಿ ಸಚಿವ ಗೋವಿಂದ ಕಾರಜೋಳರವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಚಿಕ್ಕರೇವಣ್ಣನವರನ್ನು ಗೆಲ್ಲಿಸಬೇಕೆಂದು ವಿನಂತಿಸಿದರು.
ಕರ್ನಾಟಕದ ಮಾಜಿ ಮುಖ್ಯಮಂತ್ರಿಯಾದ ಬಿಎಸ್ ಯಡಿಯೂರಪ್ಪನವರು ಅತಿ ಹೆಚ್ಚು ಯೋಜನೆಗಳನ್ನು ಕೊಡುವುದರ ಮೂಲಕ ಕರ್ನಾಟಕದ ಅಭಿವೃದ್ಧಿಗೆ ಮುನ್ನುಡಿಯನ್ನು ಬರೆದಿದ್ದಾರೆ . 2019 ಜುಲೈ 29 ನೇ ತಾರೀಕಿಗೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ಮೇಲೆ ಸತತವಾಗಿ ಮಳೆ ಸುರಿದಿದ್ದರಿಂದ ಮನೆ - ಮಠಗಳು ಕೊಚ್ಚಿಕೊಂಡು ಹೋದವು , ರೈತರ ಬೆಳೆನಾಶವಾಯಿತು , ಅನೇಕ ಜನರ ಪ್ರಾಣಹಾನಿಯಾಯಿತು ,ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋದವು ಆಸಂದರ್ಭದಲ್ಲಿ ಅತ್ಯಂತ ಮಾನವೀಯತೆಯಿಂದ ಯಡಿಯೂರಪ್ಪನವರು ಸಚಿವ ಸಂಪುಟ ಕಡೆಯಿಂದ ಒಬ್ಬರೇ ಇದ್ದರು . ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ಇತ್ತು ೯೫ ಸಾವಿರ ಬಡವರ ಮನೆ ಕಟ್ಟಿಕೊಳ್ಳಲು ಸಾಧ್ಯವಿಲ್ಲವೆಂದು ೫ ಲಕ್ಷ ಅನುದಾನ ಬಿಡುಗಡೆ ಮಾಡಿದರು ಎಂದು ತಿಳಿಸಿದರು...
ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ನವರು ನಾನು ರಾಜ್ಯದ ಮುಖ್ಯಮಂತ್ರಿ ಇದ್ದಾಗ ಕಿಸಾನ್ ಯೋಜನೆಗೆ 6 ಸಾವಿರ ರೂಪಾಯಿಗಳನ್ನು ಕೇಂದ್ರ ಸರ್ಕಾರ ಕೊಟ್ಟಗಾ ನಾನು ನಾಲ್ಕು ಸಾವಿರ ರೂಪಾಯಿಗಳನ್ನು ಸೇರಿಸಿ ಕೊಟ್ಟಿದ್ದೇನೆ . ಒಟ್ಟು ಹತ್ತೂ ಸಾವಿರ ರೂಪಾಯಿ ಪ್ರತಿ ಮನೆ ಮನೆಗೂ ಈ ಯೋಜನೆ ತಲುಪಿದೆ ಮತ್ತು ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ ಕೂಡ ನಾನು ಮುಖ್ಯಮಂತ್ರಿ ಇದ್ದಾಗ ಮಾಡಿದ್ದೇನೆ . ನಾನು ರಾಮದುರ್ಗದ ಜನತೆಗೆ ಕೇಳುವುದಷ್ಟೇ ಲಿಂಗಾಯತ್ ಸಮುದಾಯಕ್ಕೆ ಹಾಗೂ ರಾಮದುರ್ಗ ತಾಲೂಕಿನ ಜನತೆಗೆ ಈ ತಾಲೂಕಿಗೆ ನಾನೇ ಅಭ್ಯರ್ಥಿಯಾಗಿ ನಿಂತಿದ್ದೇನೆ ಎಂದು ತಿಳಿದು ನಮ್ಮ ಚಿಕ್ಕರೇವಣ್ಣ ಅವರನ್ನು ಆರಿಸಿ ತರಬೇಕು ಎಂದು ನಿಮ್ಮೆಲ್ಲರಿಗೂ ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಮಾತನಾಡಿದರು. ನಂತರ ಮಾತನಾಡಿದ ಖ್ಯಾತೆ ಉದ್ಯಮಿ ಹಾಗೂ ಶಿಕ್ಷಣ ಪ್ರೇಮಿಗಳು ಹಾಗೂ ತಾಲೂಕಿನ ಅಭ್ಯರ್ಥಿಗಳಾದ ಸನ್ಮಾನ್ಯ ಶ್ರೀ ಚಿಕ್ಕರೇವಣ್ಣ ಅವರು ನಾನು ಕಳೆದ ನಾಲ್ಕು ವರ್ಷಗಳಿಂದ ಪ್ರವಾಹ ಬಂದ ಸಮಯದಲ್ಲಿ ಹಾಗೂ ಕೋರೋನಾ ಎಂಬ ಮಹಾಮಾರಿ ಬಂದ ಸಮಯದಲ್ಲಿ ಸಾಕಷ್ಟು ರಾಮದುರ್ಗ ತಾಲೂಕಿನ ಜನತೆಗೆ ಸಹಾಯ ಮಾಡಿದ್ದೇನೆ . ಇನ್ನೂ ರಾಮದುರ್ಗದಲ್ಲಿ ಸ್ಕೂಲ್, ಹಾಸ್ಪೆಟಲ್ ಹಾಗೂ ಒಂದು ಕಾರ್ಖಾನೆ ಮಾಡುತ್ತೇನೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಹಾಗೂ ತಾಲೂಕಿನ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಚಿಕ್ಕ ರೇವಣ್ಣವರು, ರಾಜೇಶ್ ಬೀಳಗಿ, ಸಂಗೀತಾ ಯಾದವ, ರೇಖಾ ಚಿನ್ನಾಕಟ್ಟಿ, ರೇಣಪ್ಪ ಸೋಮಗೊಂಡ, ಕೆ ವಿ ಪಾಟೀಲ, ಇನ್ನೂ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು.
ವರದಿ: ನೂರಮಹ್ಮದ ಅಕ್ಕೋಜಿ...
Sign up here to get the latest post directly to your inbox.