ಬೆಳಗಾವಿ ಜಿಲ್ಲೆಯಲ್ಲಿ ರಾಮದುರ್ಗ ಮತಕ್ಷೇತ್ರದ ಬಿಜೆಪಿ ಅಧಿಕೃತ ಅಭ್ಯರ್ಥಿ ಚಿಕ್ಕರೇವಣ್ಣ ಪರವಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು. 2018 ರಲ್ಲಿ ಮಧ್ಯಪ್ರದೇಶದಲ್ಲಿ ನಿರುದ್ಯೋಗಿಗಳಿಗೆ 4 ಸಾವಿರ ಕೊಡುವುದಾಗಿ ಭರವಸೆ ನೀಡಿತ್ತು ಆದರೆ ಒಂದು ರುಪಾಯಿಯನ್ನು ನೀಡಲಿಲ್ಲ, ಅವರ ಸರ್ಕಾರ ಇರುವುದೇ ಗ್ಯಾರಂಟಿ ಇಲ್ಲ ಇನ್ನು ಅವರು ನೀಡುವ ಗ್ಯಾರಂಟಿ ಇರುತ್ತಾ ಎಂದು ಪ್ರಶ್ನಿಸಿದರು. ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಚಿಕ್ಕರೇವಣ್ಣ ಅವರಿಗೆ ಮತ ನೀಡಲು ಮನವಿ ಮಾಡಿದರು, ಬಿಜೆಪಿ ಬೆಳಗಾವಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ಮಾತನಾಡಿ ಬಿಜೆಪಿ . ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೆ ನನಗೂ ಈ ಸಲ ಟಿಕೆಟ್ ಇಲ್ಲ ನನಗೂ ಬೇಜಾರಾಗಿದೆ ಆದರೆ ನಾನು ಖುಷಿಯಾಗಿದ್ದೇನೆ ಯಾಕೆಂದರೆ ನನಗೆ ಬಿಜೆಪಿ ಪಕ್ಷವು ಎರಡು ಬಾರಿ ಶಾಸಕನಾಗಿ ಮಾಡಿದೆ. ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಚಿಕ್ಕರೇವಣ್ಣ ಪರ ಮತಯಾಚನೆ ಮಾಡಿದರು.
ಈ ಸಂಧರ್ಭದಲ್ಲಿ ಬಿಜೆಪಿ ಬೆಳಗಾವಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್, ರಾಮದುರ್ಗ ಮಂಡಳಿ ಅಧ್ಯಕ್ಷರು ರಾಜೇಶ್ ಬೀಳಗಿ, ಉತ್ತರ ಪ್ರದೇಶ ರಾಜ್ಯ ಸಂಸದೆ ಸಂಗೀತಾ ಯಾದವ್, ರಾಮದುರ್ಗ ಚುನಾವಣಾ ಉಸ್ತುವಾರಿ ಲಕ್ಷ್ಮಣ ತಪಾಸಿ, ಕೆವಿ ಪಾಟೀಲ್, ರೇನಪ್ಪ ಸೋಮಗೊಂಡ, ರೇಖಾ ಚೆನ್ನಾಕಟ್ಟಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು
ವರದಿ - ನೂರಮಹ್ಮದ ಆಕ್ಕೋಜಿ..!
Sign up here to get the latest post directly to your inbox.