ಬೆಳಗಾವಿ : ಅಳಿವಿನಂಚಿನಲ್ಲಿರುವ ಅಪರೂಪದ ವನ್ಯಜೀವಿ ಕೆಂದಳಿಲನ್ನು ಬೇಟೆಯಾಡಿದ ಬೇಟೆಗಾರನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ...
ಲೋಂಡಾ ಅರಣ್ಯ ವ್ಯಾಪ್ತಿಯ ತಿವೋಲಿ ಅರಣ್ಯ ಪ್ರದೇಶದಲ್ಲಿ ವಾಸಿಸುವ ಮತ್ತು ಕಾಡು ಬೆಕ್ಕು ಜಾತಿಯ ಪ್ರಭೇದಕ್ಕೆ ಸೇರಿದ ಕೆಂದಳಿಲನ್ನು ಬೇಟೆಯಾಡಿದ ತಿವೋಲಿ ಗ್ರಾಮದ ನಿವಾಸಿ ಲಾದ್ರು ಲೂಯಿಸ್ ಧಮೆಲ್ ನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು ; ಮತ್ತೊಬ್ಬ ಪರಾರಿಯಾಗಿದ್ದಾನೆ...
ಬಂಧಿತನಿಂದ ಒಂದು ನಾಡ ಬಂದೂಕು, ಹಲವು ಜೀವಂತ ಗುಂಡುಗಳು, ಸಿಡಿಮದ್ದು ಪೌಡರ್ ಮತ್ತು ಕೆಂದಳಿಲ ಕಳೇಬರವನ್ನು ವಶಪಡಿಸಿಕೊಂಡು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಲೋಂಡಾ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ...
Sign up here to get the latest post directly to your inbox.