ವಿಜಯಪುರ: ಚಿನ್ನದ ಅಂಗಡಿಗೆ ನುಗ್ಗಿ , ಗಾಳಿಯಲ್ಲಿ ಗುಂಡು ಹಾಕಿ ದರೋಡೆಗೆ ಯತ್ನಿಸಿದ್ದ ಐವರು ದರೋಡೆಕೋರರನ್ನು ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಪೊಲೀಸರು ಬಂಧಿಸಿ, 2 ಕಂಟ್ರಿ ಪಿಸ್ತೂಲ್‌ಗಳು, 8 ಜೀವಂತ ಗುಂಡುಗಳು, ಬೈಕ್ ಸೇರಿದಂತೆ 90 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹೌದು ಕೆಲವು ದಿನಗಳ ಹಿಂದೆ ಸಿಂದಗಿ ಪಟ್ಟಣದಲ್ಲಿ. ಚಿನ್ನದ ಅಂಗಡಿಗೆ ನುಗ್ಗಿ ದರೋಡೆಗೆ ಯತ್ನಿಸಿ ವಿಫಲರಾಗಿದ್ದ ದರೋಡೆಕೋರರು ಅರೆಸ್ಟ್ ಆಗಿದ್ದಾರೆ , ಆಲಮೇಲದ ರಾಜಾ ನೂರದ್ದಿನಸಾಬ ಸೌದಾಗಾರ (23), ಮಹಾರಾಷ್ಟ್ರ ಮೂಲದ ಪ್ರದೀಪ ಸೂರ್ಯಕಾಂತ ಕಾಳಬುರ (31), ರಾಹುಲ ಮೋಹನ ಬಾಗುಲ (22), ಆಲಮೇಲದ ಮುದಕಪ್ಪ ಅಂಬಣ್ಣ ಕಟ್ಟಿಮನಿ (23) ಹಾಗೂ ಸಾಂಗ್ಲಿ ಜಿಲ್ಲೆಯ ಬಜರಂಗಿ ರಾಮರಾವ ಪಾಟೀಲ (54) ಬಂಧಿತ ದರೋಡೆಕೋರರು.
ಸಿಂದಗಿಯ ಮೋರಟಗಿ ಬೈಪಾಸ್ ರಸ್ತೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ವೇಳೆ ಸಿಂದಗಿ ಸಿಪಿಐ ಹುಲಗಪ್ಪ ನೇತೃತ್ವದ ತಂಡ ಇವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆಲಮೇಲದ ನಾಗರಾಜ ಈರಣ್ಣ ಪತ್ತಾರ ಎಂಬುವರ ಚಿನ್ನದ ಅಂಗಡಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ , ದರೋಡೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ... ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...
Sign up here to get the latest post directly to your inbox.