ಗೋವಾ : ನಿಷೇಧಿತ ಮಾದಕ ವಸ್ತು ಹೊಂದಿದ್ದ ಗುಜರಾತ್ ಮೂಲದ ವ್ಯಕ್ತಿಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ...
ಉತ್ತರ ಗೋವಾ ಜಿಲ್ಲೆಯ ಉತ್ತರ ಸಿಯೋಲಿಮ್ ಗ್ರಾಮದಲ್ಲಿ ವಿಲ್ಲಾ ಬಾಡಿಗೆ ಪಡೆದು ವಾಸವಾಗಿದ್ದ ಜಯರಾಜ್‌ಸಿಂಗ್ ಕೀರ್ತಿಸಿಂಗ್ ಚಾವ್ಡ (33) ಎಂಬಾತ ನಿಷೇಧಿತ ಮಾದಕ ವಸ್ತುವಾದ 4.7 ಲೀಟರ್‌ನಷ್ಟು ಕೆಟಮೈನ್ ಹೊಂದಿದ್ದ 475 ವೈಯಲ್ಸ್‌ಗಳನ್ನು ಹಾಗೂ 270 ಗ್ರಾಮ್‌ನಷ್ಟು ಚರಸ್ ಸಮೇತ ಗೋವಾ ಪೊಲೀಸರ ವಶದಲ್ಲಿದ್ದಾನೆ...
ವಶಕ್ಕೆ ಪಡೆದಿರುವ ಮಾದಕ ವಸ್ತುಗಳ ಮೌಲ್ಯ ಅಂದಾಜು ₹ 25 ಲಕ್ಷ ಆಗಿದ್ದು ; ಬಂಧಿತನ ವಿರುದ್ಧ ಅಂಜುನಾ ಪೊಲೀಸರು ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕಣಗಳನ್ನು ದಾಖಲಿಸಿಕೊಂಡಿದ್ದಾರೆ...
Sign up here to get the latest post directly to your inbox.