ವಿಜಯಪುರ : ಯುವತಿಯೊರ್ವಳಿಗೆ ಚುಡಾಯಿಸಿ ಪೀಡಿಸುತ್ತಿದ್ದ ಇಬ್ಬರ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿರುವ ಘಟನೆ ತಾಲೂಕಿನ ಹೆಗಡಿಹಾಳ ಗ್ರಾಮದ ಲಂಬಾಣಿ ತಾಂಡಾದ ಬಸವ ನಗರದಲ್ಲಿ ನಡೆದಿದೆ.
ಹೌದು ತೇಜು ಚವ್ಹಾಣ, ರಾಜು ಚವ್ಹಾಣ ಎಂಬುವರಿಗೆ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಲಾಗಿದೆ...
ಹೆಗಡಿಹಾಳ ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಸಿಂಗ್ ಹಾಗೂ ತಾಂಡಾದ ಮುಖ್ಯಸ್ಥರ ಸಮ್ಮುಖದಲ್ಲಿ ತಲೆ ಬೋಳಿಸಿ ತಲೆಗೆ ಸುಣ್ಣ ಬಳಿದು ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ್ದಾರೆ..
ಮಹಾರಾಷ್ಟ್ರದಲ್ಲಿ ಓರ್ವ ಯುವತಿ ವಿಚಾರಕ್ಕೆ ಗಲಾಟೆ ಆಗಿದ್ದು, ನಂತರ ಹಿರಿಯರ ಸಮ್ಮುಖದಲ್ಲಿ ಈ ಇಬ್ಬರ ತಲೆ ಬೋಳಿಸಲಾಗಿದೆ , ಇನ್ನೂ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ಹಿರಿಯ ಪೊಲೀಸರು ಅಧಿಕಾರಿ ಮಾಹಿತಿ ತಿಳಿಸಿದ್ದು , ವಿಜಯಪುರ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ...
Sign up here to get the latest post directly to your inbox.