ತುಮಕೂರು : ಮೂಡನಂಬಿಕೆಗೆ ಪತ್ನಿಗೆ ವಿಚ್ಛೇದನ ನೀಡಲು ಕೊರ್ಟ್ ಮೆಟ್ಟಿಲೇರಿದ್ದ ಪತಿರಾಯನನ್ನ ನ್ಯಾಯಧೀಶರು ಬುದ್ಧಿ ಹೇಳಿ ದಂಪತಿಗಳನ್ನು ಒಂದು ಮಾಡಿರುವ ಘಟನೆ ನಡೆದಿದೆ...
ಹೌದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆಯ ಮಂಜುನಾಥ್, ಪಾರ್ವತಮ್ಮ ದಂಪತಿ ಐದು ವರ್ಷಗಳ ಬಳಿಕ ಒಂದಾಗಿದ್ದಾರೆ.
ಪತಿ ಮಂಜುನಾಥ್ ಮೂಡನಂಬಿಕೆಗೆ ಒಳಗಾಗಿ ಪತ್ನಿಗೆ ವಿಚ್ಚೇದನಕ್ಕೆ ಕೊರ್ಟ್ ಮೆಟ್ಟಿಲೇರಿದ್ದ ಮಂಜುನಾಥ್ ನ್ಯಾಯಾಧೀಶರ ಮಾತು ಕೇಳಿ ಪತ್ನಿ ಜೊತೆ ಬಾಳಲು ಒಪ್ಪಿದ್ದು , ಚಿಕ್ಕನಾಯಕನಹಳ್ಳಿ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಟೇಶಪ್ಪ ಸಮಾಲೋಚನೆ ನಡೆಸಿ ಬುದ್ದಿ ಹೇಳಿದ್ದು ನ್ಯಾಯಾಧೀಶರ ಮನವೊಲಿಕೆಯಿಂದ ನ್ಯಾಯಾಲಯದಲ್ಲೇ ಹಾರ ಬದಲಾಯಿಸಿ ಇಬ್ಬರು ಒಟ್ಟಿಗೆ ಬಾಳಲು ನಿರ್ಧರಿಸಿದ್ದಾರೆ ದಂಪತಿಗಳಿಗೆ ನ್ಯಾಯಾಧೀಶರು ಶುಭ ಹಾರೈಸಿದ್ದಾರೆ...
Sign up here to get the latest post directly to your inbox.