2023 "ನಮೋ" ಬಜೆಟ್ ಹೈಲೈಟ್ಸ್..!

Wed, Feb 01, 2023

ದೆಹಲಿ : ಮೋದಿ ಅಧಿಕಾರಾವಧಿಯ ಕೊನೆಯ ಬಜೆಟನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ್ದಾರೆ...

ಹೌದು, ಈ ಬಾರಿಯ  ಬಜೆಟ್ ಕೇಂದ್ರ ಹಾಗೂ ರಾಜ್ಯದಲ್ಲಿ  ಬಿಜೆಪಿ ಪಕ್ಷದ ಭವಿಷ್ಯದ ಅಳಿವು - ಉಳಿವನ್ನ ನಿರ್ಣಯಿಸುವ ನಿರ್ಣಾಯಕ ಬಜೆಟ್ ಆಗಿರಲಿದ್ದು; ಮೋದಿ ಸರ್ಕಾರ ಎಲ್ಲಾ ಕ್ಷೇತ್ರಗಳನ್ನೂ  ಮನಮುಟ್ಟುವ ಪ್ರಯತ್ನ ಮಾಡಿದೆ...


2023 ಕೇಂದ್ರ ಬಜೆಟ್ ನಲ್ಲಿ ಮುಖ್ಯವಾಗಿ  7 ಅಂಶಗಳಿಗೆ  ಆದ್ಯತೆ ನೀಡಲಾಗಿದೆ

ಸರ್ವರನ್ನು ಒಳಗೊಳ್ಳುವ ಅಭಿವೃದ್ಧಿ

ಅಂಚಿನಲ್ಲಿರುವವರಿಗೂ ಸವಲತ್ತು

ಮೂಲಸೌಕರ್ಯ

ಸಾಮರ್ಥ್ಯದ ಬಳಕೆ

ಹಸಿರು ಕ್ರಾಂತಿ

ಯುವಶಕ್ತಿಗೆ ಉತ್ತೇಜನ-ಮಹಿಳಾ ಸಬಲೀಕರಣ

ಆರ್ಥಿಕ ಸುಧಾರಣೆ

ಕೃಷಿ ಕ್ಷೇತ್ರದಲ್ಲಿ :-  ಅತ್ಯಾಧುನಿಕ ತಂತ್ರಜ್ಞಾನ ಪರಿಚಯ, ಉತ್ಪಾದನೆ ಹೆಚ್ಚಳ, ಹತ್ತಿ ಬೆಳೆಯುವ ಇಳುವರಿ ವೃದ್ಧಿ ಸೇರಿದಂತೆ ಕೃಷಿ ಅಭಿವೃದ್ಧಿಗೆ ಪೂರಕವಾದ ವಿಶೇಷ ಕೃಷಿ ಪ್ರಗತಿನಿಧಿ ಯೋಜನೆ ಆರಂಭಿಸುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾಸೀತಾರಾಮನ್ ಘೋಷಿಸಿದ್ದಾರೆ..

ಸಾರ್ವಜನಿಕ ಹಣಕಾಸು ನಿರ್ವಹಣೆ :- ಹಣಕಾಸು ಕ್ಷೇತ್ರದ ಸುಧಾರಣೆಗೆ ಕ್ರಮಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಆರ್ಥಿಕ ಪ್ರಗತಿಗೆ ತಂತ್ರಜ್ಞಾನ ಬಳಕೆ ಮಾಡಲಾಗುವುದು..

ರಾಗಿ ಸೇರಿದಂತೆ ಸಿರಿಧಾನ್ಯಗಳ ಬೆಳೆ ಪದ್ಧತಿ ಸುಧಾರಣೆಗಾಗಿ ಸಂಶೋಧನೆ ನಡೆಸಲು ಹಾಗೂ ಉತ್ತಮ ಬೆಳೆ ಪದ್ಧತಿಗಾಗಿ ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಮಿಲೆಟ್ ರಿಸರ್ಚ್ ಸಂಸ್ಥೆ-ಸಿರಿಧಾನ್ಯ ಸಂಶೋಧನೆ ಸಂಸ್ಥೆಗೆ ಸೆಂಟರ್ ಆಫ್ ಎಕ್ಸಲೆನ್ಸ್ ಉಪಕ್ರಮದ ಮೂಲಕ ನೆರವು ನೀಡುವುದು

ಭ್ರದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ಘೋಷಣೆ

ವಸತಿ ಕ್ಷೇತ್ರಕ್ಕೆ 79,000 ಕೋಟಿ ಅನುದಾನ

ಕೃಷಿ ಸಾಲಕ್ಕಾಗಿ 20 ಲಕ್ಷ ಕೋಟಿ ಮೀಸಲು

ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ಮೀಸಲು

 ◆ರೈಲ್ವೆ ವಲಯಕ್ಕೆ 2.40 ಲಕ್ಷ ಕೋಟಿ ಮೀಸಲು 

ಇತ್ಯಾದಿ ಅನೇಕ ಕ್ಷೇತ್ರವಾರು ಪ್ರಗತಿಗೆ ಈ ಬಾರಿಯ ಬಜೆಟ್ ಸಾಕ್ಷಿಯಾಗಿದೆ...

Like our news?