ಪತಿ ಪತ್ನಿಯ ಕಲಹ - ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ಪತ್ನಿ..!

Sun, Jan 29, 2023

ವಿಜಯಪುರಪತಿ ಹಾಗೂ ಪತ್ನಿ ನಡುವಿನ ಕಲಹವಾಗಿ ನೊಂದ ಪತ್ನಿ ತನ್ನ ಮೂವರು ಮಕ್ಕಳೊಂದಿಗೆ ನೀರಿನ ಸಂಪ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಹತ್ತಿರದ ವಿಠಲವಾಡಿ ತಾಂಡಾದಲ್ಲಿ ನಡೆದಿದೆ.


ಗೀತಾ ರಾಮು ಚೌಹಾಣ್ (32), ಮಕ್ಕಳಾದ ಸೃಷ್ಟಿ (6), ಕಿಶನ್ (3), ಸಮರ್ಥ (4) ಮೃತರು , ಪತಿ ರಾಮು ಹಾಗೂ ಪತ್ನಿ ಗೀತಾ ಇಬ್ಬರು ನಿನ್ನೆ ರಾತ್ರಿ ಜಗಳ ಮಾಡಿಕೊಂಡಿದ್ದರು. ಜಗಳದ ಬಳಿಕ ಗೀತಾ ಮಕ್ಕಳೊಂದಿಗೆ  ನೀರಿನ ಸಂಪ್ ಗೆ ಹಾರಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ತಿಕೋಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ...

Like our news?