ಗಣರಾಜ್ಯೋತ್ಸವದ ವೇಳೆಯಲ್ಲಿ ಸಿದ್ಧೇಶ್ವರ ಶ್ರೀಗಳ ವೇಶದಲ್ಲಿ ಬಂದ ಬಾಲಕ ; ಕೈ ಮುಗಿದು ಭಾವುಕರಾಗಿ ನಿಂತ ಜನತೆ..!

Sat, Jan 28, 2023

ವಿಜಯಪುರ : ಗಣರಾಜ್ಯೋತ್ಸವದ ದ್ವಜಾರೋಹಣ ವೇಳೆಯಲ್ಲಿ ಸಿದ್ಧೇಶ್ವರ ಶ್ರೀಗಳ ವೇಶದಲ್ಲಿ ಬಂದ ಬಾಲಕನನ್ನು ಕಂಡು ಜನತೆ ಕೈ ಮುಗಿದು ಭಾವುಕರಾಗಿ ನಿಂತ  ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಮಣಂಕಲಗಿ ಗ್ರಾಮದಲ್ಲಿ ನಡೆದಿದೆ...


ಹೌದು ಗಣರಾಜ್ಯೋತ್ಸವದ ದ್ವಜಾರೋಹಣ ನೆರವೇರಿಸುವ ಸಂಧರ್ಭದಲ್ಲಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ೬ನೇ ತರಗತಿಯ ವಿದ್ಯಾರ್ಥಿ ನಿತೀನ್ ಮಂದಾಲಿ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಸಿದ್ಧೇಶ್ವರ ಶ್ರೀ ಗಳಂತೆ ಶ್ವೇತ ವರ್ಣದ ಬಟ್ಟೆಯಲ್ಲಿ ಹಣೆಗೆ ವಿಭೂತಿ , ಕಣ್ಣಡಕದಲ್ಲಿ ಶ್ರೀಗಳಂತೆ ನಡೆದುಕೊಂಡು ಬಂದಿದ್ದು ಜನತೆ ಭಾವುಕರಾಗಿ ಕೈ ಮುಗಿದ ನಿಂತು ಸಿದ್ಧೇಶ್ವರ ಶ್ರೀಗಳನ್ನು ನೆನೆದಿದ್ದಾರೆ...

ವರದಿ - ಶಿವುಗೌಡ ಏಳಗಿ..!

Like our news?