ವಿಜಯಪುರ : ವಿಮಾನ ನಿಲ್ದಾಣ ಹಾಗೂ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸಲು ಒಪ್ಪಿಗೆ ಸೂಚಿಸಿದ ಹಿನ್ನಲೆಯಲ್ಲಿ ಫೆಬ್ರುವರಿ ಮಾಹೆಯಲ್ಲಿ ವಿಮಾನ ನಿಲ್ದಾಣ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ.ಕಾರಜೋಳ ತಿಳಿಸಿದರು.
ಇಂದು ನಗರದ ಮಧಬಾವಿ ಹತ್ತಿರದ ವಿಮಾಣ ನಿಲ್ಧಾಣ ಕಾಮಗಾರಿಗಳ ಪರಶೀಲನೆ ನಡೆಸಿದ ಅವರು ಫೆಬ್ರವರಿ ಮಾಹೆಯಲ್ಲಿ ನಿಲ್ಧಾಣ ಕಾರ್ಯವನ್ನು ಪೂರ್ಣಗೊಳಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಾನವ ಸಂಪನ್ಮೂಲವನ್ನು ಹೆಚ್ಚಿಸಿ ಕಾಮಗಾರಿಯನ್ನು ತೀವ್ರಗೊಳಿಸಬೇಕು. ಇದೆರೊಂದಿಗೆ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗಾಗಿ ಸುಮಾರು 2700 ನೂರು ಕೋಟಿ ರೂ ಬೃಹತ್ ನೀರಾವರಿ ಯೋಜನೆಯಾಗಿದೆ. ಎರಡೂ ಕಾಮಗಾರಿ ಉದ್ಘಾಟಣೆ ಕ್ರಮಕೈಗೊಳ್ಳುವಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಫೇಬ್ರವರಿ ಮಾಹೆಯಲ್ಲಿ ದೇಶದ ಪ್ರಧಾನ ಮಂತ್ರಿಗಳಿಗೆ ಮಾನ್ಯ ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡ ಹಿನ್ನೆಲೆ ಅತೀ ಸಂತೋಷದಿಂದ ಬರಲು ಒಪ್ಪಿಗೆ ಸೂಚಿಸಿರುವುದಾಗಿ ತಿಳಸಿದರು.
ವಿಮಾನ ನಿಲ್ಧಾಣ ಕಾರ್ಯ ಚುರುಕುಗೊಳಿಸಲು ಒತ್ತಡದ ಹಿನ್ನೆಲೆ ಕಾಮಗಾರಿಯನ್ನು ಬೇಗನೆ ಮುಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.
ವಿಮಾನ ನಿಲ್ಧಾಣದ ಪ್ಯಾಕೇಜ 1,2 ಹಾಗೂ 3ರ ಪ್ರಗತಿ ಜೊತೆಗೆ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ, ಇಂಡಿಗೋ ಹಾಗೂ ಸ್ಟಾರ್ ಎರ್‍ಲೈನ್ಸ್‍ನೊಂದಿಗೆ ಚರ್ಚಿಸಲಾಗಿದೆ ಉತ್ತಮ ಪತಿಕೃಯೆ ಸೂಚಿಸಿದ್ದಾಗಿ ಅವರು ತಿಳಿಸಿದರು ಅದರೊಂದಿಗೆ ನಿಲ್ಧಾಣಕ್ಕೆ ಅಗತ್ಯವಿರುವ ಅಗ್ನಿಶಾಮಕ ಠಾಣೆ, ಸಿಬ್ಬಂದಿ ನೇಮಕಾತಿ ಕುರಿತು ಸಂಬಂದಿಸಿದ ಅಧಿಕಾರಿಗಳೊಂದಿಗೆ ಮಾತುಕತೆ ಮಾಡಲಾಗಿದೆ. ಈ ನಿಲ್ಧಾಣವನ್ನು ಏರ್‍ಬಸ್-320 ವಿಮಾನಗಳ ಹಾರಾಟಿಕ್ಕಾಗಿ ಒಟ್ಟು ರೂ 347.92 ಕೋಟಿಗಳ ಮೊತ್ತಕ್ಕೆ ಮಂಜೂರಾಗಿರುತ್ತದೆ. ಸರಿ ಕಾಮಗಾರಿಗಾಗಿ ಅನುದಾನವನ್ನು ಕರ್ನಾಟಕ ಸರ್ಕರದ ಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ಭರಿಸಲಾಗುತ್ತಿದೆ ಕಾಮಗಾರಿ ಮೇಲ್ವಿಚಾರಣೆಗಾಗಿ ಬೆಂಗಳೂರಿನ ಕೆ.ಎಸ್.ಐ.ಐ.ಡಿ.ಸಿ ಸಂಸ್ಥೆ ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದೆ. ಈಗಾಗಲೇ 75 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು. ಎರಡನೇ ಹಂತದ ರೂ 125 ಕೋಟಿ ರೂಗಳಲ್ಲಿ ಎರಡು ಉಪ ಕಾಮಗಾರಿಗಳಾಗಿ ವಿಂಗಡಿಸಲಾಗಿದೆ. ಸಿವಿಲ್ ಉಪಕಾಮಗಾರಿಗಾಗಿ ರೂ 105.60 ಕೋಟಿ ಹಘೂ ಏವಿಯೋನಿಕ್ಸ/ ಸೆಕ್ಯೂರಿಟಿ ಇಕ್ವ್ಯೂಪಮೆಂಟ್ಸ್ ಉಪಕಾಮಗಾರಿಗಾಗಿ 19.40ಕೋಟಿ ರೂ ನಿಗದಿಪಡಿಸಲಾಗಿದೆ. ಇದರಲ್ಲಿ 86.20 ಕೋಟಿಗಳ ಮೊತ್ತದಲ್ಲಿ ಟರ್ಮಿನಲ್ ಕಟ್ಟಡ, ಎಟಿಸಿ ಟಾವರ್, ಸಿ.ಎಫ್.ಆರ್. ಕಟ್ಟಡ, ಕಂಪೌಂಡ ಗೋಡೆ ಹಾಗೂ ಇತರೆ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲು ಹೈದರಾಬಾದನ ಮೇ.ಕೆ.ಎಮ್.ವಿ ಕನಸ್ಟ್ರಕ್ಸನ್ ಕಂಪನಿ ವಹಿಸಲಾಗಿದೆ. ವಿಮಾನ ನಿಲ್ದಾಣಕ್ಕೆ 24/7 ನೀರು ಸರಬರಾಜು ಮಾಡುವುದನ್ನು ಪರಿಗಣಿಸಲಾಗಿದ್ದು, ಜಿ.ಎಲ್.ಎಸ್.ಆರ್. ರಾಪ್ಟ್ & ಗೋಡೆ ಕಾಂಕ್ರಿಂಟ್ ಹಾಕಲಾಗಿದೆ. 8.00 ಕಿ.ಮೀ. ಪೈಕಿ 3.00 ಕಿ.ಮೀ. ಪೈಪಲೈನ್ ಕಾಮಗಾರಿ ಪೂರ್ಣಗೊಂಡಿದೆ. ವಿದ್ಯುತ್ ಸರಬರಾಜು ಟೆಂಡರ್ ಪ್ರಕ್ರಿಯೆಲ್ಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಇಇ ಸಿ.ಬಿ.ಚಿಕ್ಕಲಕಿ, ಎಇಇ ಆರ್.ಕೆ. ಮುಜುಮದಾರ, ಎ.ಇ. ರೇವಣ್ಣ ಮಸಳಿ, ಗುತ್ತಿಗೆದಾರ ಎಸ್.ಎಸ್. ಆಲೂರ ಕೆ.ಎಂ.ವಿ. ಪ್ರೊಜೆಕ್ಟ್ ಮ್ಯಾನೇಜರ್ ಸರವಣನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Sign up here to get the latest post directly to your inbox.