ವಿಜಯಪುರ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ವಿರುದ್ಧ ತಪ್ಪು ಹೇಳಿಕೆ ನೀಡಿರುವುದನ್ನು ವಿರೋಧಿಸಿ ಕಾ.ನಿ.ಪ ದ್ವನಿ ಸಂಘಟನೆ ವತಿಯಿಂದ ಶುಕ್ರವಾರದಂದು ವಿಜಯಪುರ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು...
ಈ ಸಂದರ್ಭದಲ್ಲಿ ಮಾತನಾಡಿದ ಕಾನಿಪ ದ್ವನಿಯ ಪದಾಧಿಕಾರಿಗಳು ಬೀದರ ಜಿಲ್ಲೆಯ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶಿವಕುಮಾರ ಸ್ವಾಮಿ ಎಂಬಾತ ಕರ್ನಾಟಕ ಕಾರ್ಯನಿರತ ಪತ್ರಕರ್ತ ಧ್ವನಿ ಸಂಘಟಣೆಯನ್ನು ನಕಲಿ ಸಂಘ ಎಂದು ಹೇಳಿಕೆ ನೀಡಿದ್ದು ತಪ್ಪು ಕಾನೂನಾತ್ಮಕವಾಗಿ ರಚನೆಯಾದ ಸಂಘ ಹಾಗೂ ಸಂಘದ ರಾಜ್ಯಾಧ್ಯಕ್ಷರನು ನಿಂದಿಸಿದ್ದು ಖಂಡನೀಯ ಮತ್ತು ಈ ಧ್ವನಿ ಸಂಘಟಣೆಯು ರಾಜ್ಯದ ೨೭ ಜಿಲ್ಲೆಗಳಲ್ಲಿದ್ದು ಕಾನೂನ್ಮಾತಕ ವಾಗಿ ನೊಂದಣಿಯಾಗಿದೆ.
ಆದರೆ ಈ ಶಿವಕುಮಾರ ಸ್ವಾಮಿ ಯಾವುದನ್ನು ಪರಾಮರ್ಶಿಸದೆ ಒಂದು ಸಂಘದ ಉನ್ನತ ಹುದ್ದೆಯಲ್ಲಿದುಕೊಂಡು ಬೇಜವಾಬ್ದಾರಿ ಅವಿವೇಕಿತನದ ಹೇಳಿಕೆ ನೀಡಿ ಸಂಘದ ಹಾಗೂ ರಾಜ್ಯಾಧ್ಯಕ್ಷರ ಘನತೆಗೆ ಕುಂದು ತಂದಿದ್ದು ಮತ್ತು ಈಗಾಗಲೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇವನ ಮೇಲೆ ದೂರು ನೀಡಲು ನಿರ್ಧರಿಸಿದ್ದುಆದರಿಂದ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ವಿಜಯಪುರ ಕಾ.ನಿ.ಪ.ದ್ವನಿ ಜಿಲ್ಲಾಧ್ಯಕ್ಷ ಯುಸೂಫ್ ನೇವಾರ್ ಆಗ್ರಹಿಸಿದರು...
ಈ ವೇಳೆಯಲ್ಲಿ ಕಾ.ನಿ.ಪ.ಧ್ವನಿ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಇರ್ಫಾನ್ ಬೀಳಗಿ , ಪ್ರಧಾನ ಕಾರ್ಯದರ್ಶಿ ವಿನಾಯಕ್ ಸೊಂಡೂರ್, ರಾಜ್ಯ ಕಾರ್ಯಕಾರಿ ಸದಸ್ಯ ರಾಹುಲ್ ಮಾನಕರ, ಜಿಲ್ಲಾ ಕಾರ್ಯದರ್ಶಿ ಮಧುರ ತಿಳಗೂಳಕರ, ಉದಯ ಆಕಾಶ್, ಖಜಾಂಚಿ ಸರ್ದಾರ್ ಆರ್ ಪತ್ತಾರ್, ಸಿದ್ದು ಸಿಂಗೆ, ಸಿದ್ದು ಕಲ್ಲುರ್, ಶಶಿ ಪಾಡೆವರ್, ಅಮೀನ್ ಶೇಕ್, ಎಂ.ಎ ಮಾಲಬೌವಡಿ, ಸಂಘದ ಹಲವಾರು ಸದಸ್ಯರು ಉಪಸ್ಥಿತರಿದರು...
Sign up here to get the latest post directly to your inbox.