ABVP ಹಾಗೂ ಸಂಘಪರಿವಾರದ ಯುವಕರಿಂದ ರಕ್ತದಾನದ ಮೂಲಕ ಶ್ರೀ ಗಳಿಗೆ ಶ್ರದ್ಧಾಂಜಲಿ..!

Wed, Jan 04, 2023

ವಿಜಯಪುರ : ಕಿಸೆ ಇಲ್ಲದ ಶರಣ ನಡೆದಾಡುವ ದೇವರು ಎಂದು ಪ್ರಖ್ಯಾತಿ ಪಡೆದಿದ್ದ ಸಿದ್ಧೇಶ್ವರ ಶ್ರೀಗಳ ಲಿಂಗೈಕ್ಯರಾದ ಹಿನ್ನಲೆಯಲ್ಲಿ ಶ್ರೀಗಳಿಗೆ ರಕ್ತದಾನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಯುವಕರು ಮಾದರಿಯಾಗಿದ್ದಾರೆ...


ಹೌದು ವಿಜಯಪುರ ನಗರದ ಜ್ನಾನಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆ ಇಂದು ವಿಜಯಪುರ ನಗರದ ABVP ಹಾಗೂ ಸಂಘ ಪರಿವಾರದ ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಶ್ರೀಗಳಿಗೆ ಶ್ರದ್ಧಾಂಜಲಿ ಸಮರ್ಪಿಸಿ ಶ್ರೀಗಳು ತೋರಿದ ದಾರಿಯಲ್ಲಿ ನಡೆದು ಮಾದರಿಯಾಗಿದ್ದಾರೆ ,


ಶ್ರೀ ಸಿದ್ಧೇಶ್ವರ ಸ್ವಾಮಿಗಳ ಸ್ಮರಣಾರ್ಥವಾಗಿ ಇಂದು ಏಳು  ಜನ ಯುವಕರು ನಗರದ ಆಕಾಶ ರಕ್ತ ಸಹಾಯವಾಣಿಯ ಸಹಕಾರದೊಂದಿಗೆ ರಕ್ತದಾನ ಮಾಡುವ ಮೂಲಕ ಶ್ರೀಗಳಿಗೆ ತಮ್ಮ ಅಂತಿಮ ನಮನ ಸಲ್ಲಿಸಿ ಯುವ ಸಮೂದಾಯಕ್ಕೆ ಪ್ರೇರಣೆಯಾಗಿದ್ದಾರೆ...

Like our news?