ಸಿದ್ದೇಶ್ವರ ಶ್ರೀ ಗಳು 2014 ರಲ್ಲೇ ಬರೆದಿದ್ದರು ಅಂತಿಮ ಅಭಿವಂದನ ಪತ್ರ..!

Mon, Jan 02, 2023

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು (81) ಲಿಂಗೈಕ್ಯರಾಗಿದ್ದು ಅವರ ಅಂತಿಮಸಂಸ್ಕಾರದ ಕುರಿತು ಸ್ವತಃ ಶ್ರೀ ಗಳು ಪತ್ರ ಬರೆದಿದ್ದು ಅವರ ಆಶಯದಂತೆ ನೆರವೆರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ...
ಸಂಜೆ 6 .5 ನಿಮಿಷಕ್ಕೆ ಗಂಟೆಗೆ ಶ್ರೀಗಳು ಲಿಂಗೈಕ್ಯರಾಗಿದ್ದಾರೆ.  ನಸುಕಿನ ಜಾವ 4 ಗಂಟೆಯವರೆಗೆ ಜ್ಞಾನಯೋಗಾಶ್ರಮದ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.  ನಾಳೆ ಬೆಳಿಗ್ಗೆಯಿಂದ ಮ.3ರ ವರೆಗೆ ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು.  ಸಂ. 5ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿಸಿದ್ದು , ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಾಳೆ ಬೆಳಗ್ಗೆ 11 ಕ್ಕೆ ವಿಜಯಪುರಕ್ಕೆ ಪ್ರಯಾಣಿಸಲಿದ್ದಾರೆ. ಇನ್ನೂ ಜಿಲ್ಲೆಯಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ

Like our news?