BD1 ನ್ಯೂಸ್ ಕನ್ನಡ ಫಲಶ್ರುತಿ : ಶ್ವಾನ ಸಂರಕ್ಷಣಾ ಕಾರ್ಯಾಚರಣೆ ಯಶಸ್ವಿ ; ಜನಪರ ಮಾತ್ರವಲ್ಲ ಮೂಕಪ್ರಾಣಿಗಳ ಪರವೂ ನಿಂತ BD1 ನ್ಯೂಸ್ ಕನ್ನಡ..!

Wed, Dec 21, 2022

ವಿಜಯಪುರBD1ನ್ಯೂಸ್ ಕನ್ನಡ  ಸುದ್ದಿಗೆ ಎಚ್ಚೆತ್ತ ಮಹಾನಗರ ಪಾಲಿಕೆ ಮರಳಿ ಶ್ವಾನಗಳನ್ನು ಅವುಗಳ ನೆಲೆಗೆ ತಲುಪಿಸಿದೆ...


ಹೌದು, "ವಿಜಯಪುರ ಮಹಾನಗರ ಪಾಲಿಕೆ ಸಿಬ್ಬಂದಿಯ ರಾಕ್ಷಸ ವರ್ತನೆ ; ಅಮಾನುಷವಾಗಿ ಹಲ್ಲೆ ನಡೆಸಿ ಶ್ವಾನ ಸೆರೆ ಹಿಡಿಯುವುದು ಎಷ್ಟು ಸರಿ ..!" ಎಂಬ ಶಿರ್ಷಿಕೆ ಅಡಿಯಲ್ಲಿ BD1ನ್ಯೂಸ್ ಕನ್ನಡ  ಸುದ್ದಿ ಪ್ರಸಾರ ಮಾಡಿತ್ತು ಇದಕ್ಕೆ  ಸ್ಪಂದಿಸಿದ ಬೆಂಗಳೂರಿನ ಎನಿಮಲ್ ವೆಲ್ಫೇರ್ ನ SPCA ಹರೀಶ್ ಕೆ.ಬಿ. ಮತ್ತು ವಿಜಯಪುರದ ಧನು ಕರ್ಬಿ , ರಶ್ಮಿ ಹೇರಳಗಿ ತಂಡ ಅನೇಕ ಶ್ವಾನಗಳನ್ನು ಸಂರಕ್ಷಿಸುವಲ್ಲಿ ಮತ್ತು  ತಾಯಿಶ್ವಾನ ಹಾಗೂ ಅನಾಥ ಮರಿಗಳನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ...

ಇದನ್ನು ಓದಿ : - ವಿಜಯಪುರ ಮಹಾನಗರ ಪಾಲಿಕೆ ಸಿಬ್ಬಂದಿಯ ರಾಕ್ಷಸ ವರ್ತನೆ ; ಅಮಾನುಷವಾಗಿ ಹಲ್ಲೆ ನಡೆಸಿ ಶ್ವಾನ ಸೆರೆ ಹಿಡಿಯುವುದು ಎಷ್ಟು ಸರಿ ..!

ಇಂಪ್ಯಾಕ್ಟ್ ವರದಿ :-

ವಿಜಯಪುರ ಮಹಾನಗರ ಪಾಲಿಕೆ  ಕಾರ್ಮಿಕರು ಅಮಾನವೀಯವಾಗಿ  ನಡೆದುಕೊಂಡಿದ್ದ ಕೃತ್ಯವನ್ನು ಸಾಕ್ಷಿ ಸಮೇತ ವರದಿ ಮಾಡಿದ್ದ BD1ನ್ಯೂಸ್ ಕನ್ನಡ ಮತ್ತು ಎನಿಮಲ್ ವೆಲ್ಫೇರ್ ತಂಡ ಈ ಸುದ್ದಿಯನ್ನು ರಾಜ್ಯದ ಪಶುಸಂಗೋಪನಾ ಸಚಿವರಾದ  ಪ್ರಭು ಚಾಹಾಣ್, ಮುಖ್ಯಮಂತ್ರಿ ಗಮನಕ್ಕೆ ತಂದಿತ್ತು... ಮಾತ್ರವಲ್ಲ  ಪ್ರಾಣಿ ಕಲ್ಯಾಣ ಸಹಾಯವಾಣಿಯಲ್ಲೂ ದೂರು ದಾಖಲಿಸಿತ್ತು... 

ಕಾನೂನುಬಾಹಿರವಾಗಿ ನಡೆದ ಕೃತ್ಯ ವರದಿಯಾಗುತ್ತಿದ್ದಂತೆ ಎಚ್ಚೆತ್ತ ವಿಜಯಪುರ ಮಹಾನಗರ ಪಾಲಿಕೆ ಸಿಬ್ಬಂದಿ ವರ್ಗ ರಾತ್ರೋರಾತ್ರಿ ಶ್ವಾನಗಳನ್ನು ತಂದು ರಸ್ತೆಯಲ್ಲಿ ಬಿಟ್ಟುಹೋಗಿದ್ದು ;  ಹಲವು ಮುಗ್ದ ಜೀವಿಗಳ ರಕ್ಷಣೆಯಾಗಿದೆ ಮತ್ತು ಮೂಕಕಂದಮ್ಮಗಳು ತಾಯಿಮಡಿಲನ್ನು ಸೇರಿವೆ...

ಈ ಸಂಪೂರ್ಣ ಕಾರ್ಯಾಚರಣೆಯಲ್ಲಿ ರಾಜ್ಯ ಪಶುಸಂಗೋಪನಾ ಇಲಾಖೆಯ ಸೆಕ್ರೇಟರಿಯಾದ  ಸಲ್ಮಾ ಫಾಹಿಂ IAS ನಮ್ಮ ಸುದ್ದಿವಾಹಿನಿಗೆ ಬೆಂಬಲವಾಗಿ ನಿಂತು ಮತ್ತು ಮೂಕಪ್ರಾಣಿಗಳ ಪರವಾಗಿ ದಕ್ಷತೆಯ ಕಾರ್ಯನಿರ್ವಹಿಸಲು ಸಹಕರಿಸಿದ್ದಾರೆ,


ಇನ್ನುಳಿದಂತೆ  ಬೆಂಗಳೂರಿನ ಎನಿಮಲ್ ವೆಲ್ಫೇರ್ ನ SPCA ಹರೀಶ್ ಕೆ.ಬಿ. ಮತ್ತು ವಿಜಪುಯರದ  ಧನು ಕರಾಬಿ , ಡಾ. ರಶ್ಮಿ ಹೇರಳಗಿ ತಂಡ ಸಮಾಜಮುಖಿ ಕಾರ್ಯಕ್ಕೆ ಮುಂಚೂಣಿಯಕಾರ್ಯವೈಕರಿ ಶ್ಲಾಘನೀಯ...

Like our news?