ಬೆಂಗಳೂರು : ವಿಶ್ವದ ಅತಿದೊಡ್ಡ A380 ವಿಮಾನ ಇಂದು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಲ್ಯಾಂಡ್ ಆಗಲಿದೆ...
ಹೌದು, ಎಮಿರೇಟ್ಸ್ ಏರ್ಲೈನ್ಸ್ ವಿಮಾನ ಸಂಸ್ಥೆಯ EK562 ವಿಮಾನ ದುಬೈನಿಂದ ಇಂದು ಬೆಳಗ್ಗೆ 10 ಗಂಟೆಗೆ ಟೇಕಾಫ್ ಆಗಿದ್ದು, ಇಂದು ಮಧ್ಯಾಹ್ನ 3:40 ಕ್ಕೆ (ಸ್ಥಳೀಯ ಸಮಯ) ಬೆಂಗಳೂರಿನಲ್ಲಿ ಇಳಿಯಲಿದೆ. ಮತ್ತೆ ವಿಮಾನ ಬೆಂಗಳೂರಿನಿಂದ ಸಂಜೆ 6:40 ಕ್ಕೆ (ಸ್ಥಳೀಯ ಸಮಯ) ಹೊರಟು ರಾತ್ರಿ 9 ಗಂಟೆಗೆ (ಸ್ಥಳೀಯ ಸಮಯ) ದುಬೈ ತಲುಪಲಿದೆ...
ವಿಶೇಷತೆ :-
A380 ಡಬಲ್ ಡೆಕ್ಕರ್ ವಿಮಾನ ವಿಶ್ವದ ಅತಿದೊಡ್ಡ ವಿಮಾನವಾಗಿದ್ದು, 500 ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯ ಹೊಂದಿದೆ. ವಿಮಾನದಲ್ಲಿ ಫಸ್ಟ್ ಕ್ಲಾಸ್, ಎಕಾನಮಿ ಮತ್ತು ಬ್ಯೂಸಿನೆಸ್ ಟಿಕೆಟ್ ವ್ಯವಸ್ಥೆ ಇದೆ. ಎಕಾನಮಿ ಕ್ಲಾಸ್ ವಿಶಾಲವಾಗಿದ್ದು, ಹೆಚ್ಚುವರಿ ಲೆಗ್‌ರೂಮ್ ಹೊಂದಿದೆ. ಬ್ಯೂಸಿನೆಸ್ ಕ್ಲಾಸ್ನಲ್ಲಿ ಸೀಟ್ ವ್ಯವಸ್ಥೆ ಮಾತ್ರ ಹೊಂದಿದೆ, ಫಸ್ಟ್ ಕ್ಲಾಸ್ನಲ್ಲಿ ಖಾಸಗಿ ಸೂಟ್‌ಗಳು ಮತ್ತು ಶವರ್ ಸ್ಪಾಗಳನ್ನು ಹೊಂದಿದೆ...
Sign up here to get the latest post directly to your inbox.