ವಿಜಯಪುರ:BLDE ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಅಧ್ಯಾಪಕ ಸಂದೀಪ್ ವಠಾರ ಎಂಬಾತ ದೇಶದ್ರೋಹ ಪೊಸ್ಟ ಹಾಕಿದ ಹಿನ್ನಲೆ ಅವರನ್ನು ಕಾಲೇಜಿನಿಂದ ಅಮಾನತುಗೊಳಿಸುವಂತೆ ಆಗ್ರಹಿಸಿ ABVP ಕಾರ್ಯಕರ್ತರು ಹಾಗು BLDE ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಹೋರಾಟಕ್ಕೆ ಮಣಿದ ಆಡಳಿತ ಮಂಡಳಿ ಸಂದೀಪನನ್ನು 2 ದಿನಗಳಲ್ಲಿ ಅಮಾನತುಗೊಳಿಸುವುದಾಗಿ ಭರವಸೆ ನೀಡಿದೆ. ಇದರ ಹಿನ್ನೆಲೆಯಲ್ಲೇ ಸಂದೀಪ್ ಮಂಡಿಯೂರಿ ಕ್ಷಮೆ ಕೇಳಿದ ಘಟನೆ ನಡೆದಿದೆ.
ದೇಶವೀರೋಧಿ ಹೇಳಿಕೆ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದ ಗೃಹ ಸಚಿವರು ತಮ್ಮದೇ ಒಡೆತನದ ಸಂಸ್ಥೆಯಲ್ಲೇ ನಡೆದಿರುವ ಈ ಘಟನೆಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ....
Sign up here to get the latest post directly to your inbox.