❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
ಇಂದು ವಿಶ್ವ ಹೃದಯ ದಿನ. ದೈಹಿಕವಾಗಿಯೂ, ಭಾವನಾತ್ಮಕವಾಗಿಯೂ ಮನುಷ್ಯನ ಅಸ್ತಿತ್ವದ ಸಂಕೇತವಾಗಿರುವ ಹೃದಯದ ಬಗ್ಗೆ ಜಾಗೃತಿ ಮೂಡಿಸುವ ಈ ದಿನ ಎಲ್ಲರಿಗೂ ತಿಳಿದಿರಲೇಬೇಕು.
ಹೌದು, ಇಡೀ ವಿಶ್ವವೇ ಹೃದಯಕ್ಕೆ ಸಂಬಂಧಿಸಿದ ಅನೇಕ ರೋಗಗಳಿಗೆ ಒಳಗಾಗುತ್ತಿದೆ. ಪ್ರತಿ ವರ್ಷವೂ 17.1 ಮಿಲಿಯನ್ ಜನರು ಹೃದಯದ ಸಮಸ್ಯೆಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೇ ಶೇ 80 ರಷ್ಟು ಹೃದಯದ ಕಾಯಿಲೆ ಅಭಿವೃದ್ದಿಯಾಗಿರುವುದು ಆತಂಕದ ಸಂಗತಿ. ವ್ಯಕ್ತಿಗತವಾಗಿಯೇ ಹೃದಯದ ಸ್ವಾಸ್ಥ್ಯದ ಬಗ್ಗೆ ಜಾಗೃತಿ ಮೂಡಿಸಿದರೆ ಪ್ರಪಂಚದಲ್ಲಿ ಹೃದಯದ ರೋಗಗಳಿಗೆ ತುತ್ತಾಗುವವರ ಸಂಖ್ಯೆ ಕಡಿಮೆ ಮಾಡುವುದು ಸಾಧ್ಯವಿದೆ. ನೀವು ಕೈಗೊಳ್ಳುವ ಸಣ್ಣ ಬದಲಾವಣೆ ಎಲ್ಲರ ಹೃದಯವನ್ನೂ ಜೋಪಾನವಾಗಿಡಲು ಸಹಾಯ ಮಾಡುತ್ತದೆ. ಮಾಡಬೇಕಾಗಿರುವುದು ಇಷ್ಟೆ…
* ಒತ್ತಡ ಕಡಿಮೆಮಾಡಿಕೊಳ್ಳಿ.
* ಮಧುಮೇಹ ನಿಯಂತ್ರಣದಲ್ಲಿರಲಿ
* ಬೊಜ್ಜು ಅತಿಯಾಗದಿರಲಿ
* ಯಾವಾಗಲೂ ಚಟುವಟಿಕೆಯಿಂದಿರಿ
* ರಕ್ತದಲ್ಲಿ ಕೊಬ್ಬು ಸೇರಿಕೊಳ್ಳದಂತೆ ನೋಡಿಕೊಳ್ಳಿ
* ವೈದ್ಯರ ಸಲಹೆಯನ್ನು ನಿರ್ಲಕ್ಷಿಸಬೇಡಿ
* ಒಳ್ಳೆಯ ಆಹಾರ ಕ್ರಮ ನಿಮ್ಮದಿರಲಿ..
ವಿಶೇಷ ವರದಿ : ಲವೀನಾ ಸೋನ್ಸ್..!
Sign up here to get the latest post directly to your inbox.