ವಿಜಯಪುರ: ಬಿಜೆಪಿ ಜಿಲ್ಲಾ ಘಟಕದಲ್ಲಿ ಮತ್ತೊಮ್ಮೆ ಭಿನ್ನಮತ ಸ್ಪೋಟವಾಗಿದೆ ಹೌದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳರಿಂದ ಸಂಸದರಿಗೆ ತಮ್ಮ ಪೇಸ್ ಬುಕ್ ಖಾತೆಯಲ್ಲಿ ಸಂಸದರ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಶ್ನೆ ಮಾಡಲಾಗಿದೆ...
* ಹತ್ತು ವರ್ಷಗಳಲ್ಲಿ ಸಂಸದರ ನಿಧಿ ಎಲ್ಲಿ ಹೋಯಿತು ? ಯಾವ ಹಳ್ಳಿಗೆ ಎಷ್ಟು ಹಣ ಮಟ್ಟಿತು ?.ವಿನಶೆ ಕಾಲೇ ವೀಪರಿತ ಬುದ್ಧಿ.
* ಸಂಸದರ ಆದರ್ಶ ಗ್ರಾಮದ ಪರಿಸ್ಥಿತಿ ಹೇಗಿದೆ ?
* ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದರ ಆದರ್ಶ ಗ್ರಾಮ ಮಖಣಾಪೂರ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ಹಳ್ಳಿ. ನಾಚಿಕೆಗೇಡು
* ಹಿಂದಿನ ಯಾವ ಸಂಸದರೂ ಮಾಡದಷ್ಟು ಅಭಿವೃದ್ಧಿ ನಾನು ಮಾಡಿದ್ದೇನೆ ಎಂದು ಹೇಳಲು ನಾಚಿಕೆಯಾಗಬೇಕು. ಹೀಗೆ ಪ್ರಶ್ನೆಗಳನ್ನು ಮಾಡಿದ್ದಾರೆ.
ಈ ಹಿಂದೆಯು ಯತ್ನಾಳರ ಬಲಗೈ ಭಂಟ್ ರಾಘು ಅಣ್ಣಿಗೇರಿ ಕೂಡಾ ಸಂದರಿಗೆ ದಿನಕ್ಕೊಂದು ಪ್ರಶ್ನೆಯನ್ನು
ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಶ್ನೆ ಕೇಳಿ ಬಿಜೆಪಿಯಲ್ಲಿ ಭಿನ್ನಮತವಿದೆ ಎನ್ನುವುದನ್ನು ತಮ್ಮ ಸಾಮಾಜಿಕ ಜಾಲತಾಣಗಳ ಪೋಸ್ಟ್ ಮೂಲಕ ಸಂಸದರ ಮೇಲಿನ ಆಕ್ರೋಶ ಹೊರಹಾಕಿದ್ದರು. ಆದರೆ ಈಗ ಸ್ವತಃ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮ ಪೇಸ್ ಬುಕ್ ಅಕೌಂಟ್ ಮೂಲಕ ಸಂಸದರಿಗೆ ನೇರ ಪ್ರಶ್ನೆ ಹಾಕುವ ಮೂಲಕ ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ, ಇಷ್ಟು ದಿನ ಅವರ ಬೆಂಬಲಿಗರು ಪೋಸ್ಟ್ ಹಾಕಿ ಭಿನ್ನಮತವಿದೆ ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದರು, ಆದರೆ ಈಗ ಸ್ವತಃ ಶಾಸಕರು ಹಾಕಿರುವ ಪೋಸ್ಟಗಳಿಂದ ಸ್ಪಷ್ಷವಾಗುತ್ತದೆ ಜಿಲ್ಲಾ ಬಿಜೆಯಲ್ಲಿ ಏನು ಸರಿ ಇಲ್ಲ ಮನೆಯೊಂದು ಮೂರು ಬಾಗಿಲುಗಳಾಗಿವೆ ಅಂತಾ...
Sign up here to get the latest post directly to your inbox.