ರಾಜ್ಯ ಪಠ್ಯಕ್ರಮದಲ್ಲಿ ಬಾಬಾಬುಡನ್​ಗಿರಿ ಹೆಸರನ್ನು ಬದಲಿಸಿ, ಇನಾಂ ದತ್ತಾತ್ರೇಯಪೀಠ ಎಂದು ಮುದ್ರಿಸಿ : ಶಿಕ್ಷಣ ಸಚಿವ ನಾಗೇಶ್ ಆದೇಶ..!

Fri, Dec 31, 2021

ಬೆಂಗಳೂರು : ವಿವಿಧ ತರಗತಿಗಳ ಪಠ್ಯಪುಸ್ತಕಗಳಲ್ಲಿ ಇರುವ ಬಾಬಾಬುಡನ್​ಗಿರಿ ಹೆಸರಿನ ಉಲ್ಲೇಖ ಬದಲಿಸಲು ಶಿಕ್ಷಣ ಸಚಿವ ಬಿ.ಸಿ.ನಾಗೇಶ್  ಸೂಚಿಸಿದ್ದಾರೆ... 


ಹೌದು,ಇತ್ತೀಚೆಗಷ್ಟೇ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಸರ್ಕಾರದ ಅಧಿಕೃತ ದಾಖಲೆಗಳಲ್ಲಿ ಇರುವಂತೆಯೇ ಪಠ್ಯಪುಸ್ತಕಗಳಲ್ಲಿಯೂ ಬಾಬಾಬುಡನ್​ಗಿರಿ ಹೆಸರಿನ ಉಲ್ಲೇಖ ಬದಲಿಸಬೇಕು ಎಂದು ಸಚಿವರ ಗಮನ ಸೆಳೆದಿದ್ದರು... 


ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪಠ್ಯಕ್ರಮದ 4, 6 ಮತ್ತು 9ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಬಾಬಾಬುಡನ್​ಗಿರಿ ಬದಲು ಇನಾಮ್ ದತ್ತಾತ್ರೇಯಪೀಠ ಎಂದು ಮುದ್ರಿಸಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿರ್ದೇಶನ ನೀಡಿದ್ದಾರೆ...

Like our news?