ವಿಜಯಪುರ : ನಗರದಲ್ಲಿ ಇಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೇತೃತ್ವದಲ್ಲಿ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಗರದ ಸಿದ್ದೇಶ್ವರ ದೇವಸ್ಥಾನ ಎದುರು ನೂರಾರು ಜನರಿಂದ ಹುತಾತ್ಮ ಯೋಧರಿಗೆ ನುಡಿ ಸಲ್ಲಿಸಲಾಯಿತು.
ಬಳಿಕ ಯತ್ನಾಳ ನೇತೃತ್ವದಲ್ಲಿ ನಡೆದ ಬೃಹತ್ ಮೆರವಣಿಗೆ ನಗರದ ವಿವಿಧ ಮಾರ್ಗಗಳಲ್ಲಿ ಮೇಣದ ಬತ್ತಿ ಹಿಡಿದು ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸುತ್ತಾ ಅಮರ ರಹೆ, ಅಮರ ರಹೆ ವೀರ ಜವಾನ ಅಮರ ರಹೆ ಎಂಬ ಘೋಷಣೆಯೊಂದಿಗೆ ಹೊರಟ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ವ್ಯಾಪಾರಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ೩೦೦ ಮೀಟರ್ ಉದ್ದದ ಭಾರತ ಧ್ವಜ ಹಿಡಿದು ಹೊರಟ ಶ್ರದ್ಧಾಂಜಲಿ ನಗರದ ಗಾಂಧಿಚೌಕ್ ನಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆ ಉದ್ದಕ್ಕೂ ಉಗ್ರರ ಹಾಗೂ ಪಾಪಿ ಪಾಕಿಸ್ತಾನದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು, ಬಳಿಕ ಗಾಂಧಿ ವೃತ್ತದಲ್ಲಿ ಪಾಕ್ ದ್ವಜಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಯತ್ನಾಳ ನಾಚಿಕೆ ಗೇಡಿ ಪಾಕಿಸ್ತಾನದವರು ಸತ್ತರೆ ಸ್ವರ್ಗಕ್ಕೆ ಹೊಗುತ್ತಾರಂತೆ. ನೀವು ಸ್ವರ್ಗಕ್ಕೆ ಹೋಗಲ್ಲ ಚರಂಡಿ ನಿರೇ ನಿಮಗೆ ಗತಿ. ವಿಜಯಪುರದ ಒಬ್ಬ ಅಯೊಗ್ಯ ಪಾಕಿಸ್ತಾನಕ್ಕೆ ಯಾಕೆ ಬೈತೀರಾ ಅಂದಿದ್ದಾರೆ. ಅಯೋಗ್ಯ ನನ್ನ ಮಗನೇ ನೀವು ಹುಟ್ಟಿದ್ದು ಪಾಕಿಸ್ತಾನಕ್ಕಾ, ವಿಜಯಪುರಕ್ಕಾ ಎಂದು ಪ್ರಶ್ನಿಸಿದರು. ಇನ್ನು
ಗ್ರಹ ಮಂತ್ರಿ ಹೇಳುತ್ತಾರೆ ನಾನು ಯಾವುದೇ ಅಹಿತಕರ ಹೇಳಿಕೆ ಸಹಿಸುವದಿಲ್ಲ ಎಂದು. ಮೊದಲು ನಿಮ್ಮ ಪಕ್ಷದವರನ್ನು ನೋಡಿಕೊಳ್ಳಿ.
ಬಸನಗೌಡ, ಅಂತನಕುಮಾರ ಹೆಗಡೆಗೆ ಬಳಿಕ ನೋಡಿಕೊಳ್ಳಿ.ಕೇಸು ಗೀಸಿಗೆಲ್ಲ ನಾವು ಹೆದರಲ್ಲ ಎನು ಕಿತ್ತು ಕೊಳ್ಳತೀರಿ ಕಿತ್ತಿಕೊಳ್ಳಿ ಎಂದು ಗ್ರಹ ಸಚಿವರಿಗೆ ಸವಾಲು ಹಾಕಿದರು. ನಾವು ದೇಶದ ಪರವಾಗಿ ಮಾತನಾಡುತ್ತೇವೆ, ನಾವೇನು ದೇಶದ ವಿರೋಧಿಗಳಲ್ಲ.ಯಾರು ದೇಶದ ಅನ್ನತಿಂದು ದೇಶದ ವಿರುದ್ದ ಮಾತನಾಡುವವರಿಗೆ ನಾವು ಬಿಡುವುದಿಲ್ಲ. ದಿನೇಶ ಅಮಿನಮಟ್ಟು ಹೇಳುತ್ತಾರೆ ಸಂಬಳಕ್ಕಾಗಿ ದೇಶದ ಸೈನ್ಯಕ್ಕೆ ಸೇರುತ್ತಾರೆ ಎಂದು. ಸೈನಿಕರ ಬಗ್ಗೆ ಮಾತನಾಡುವವರು ನಿಮ್ಮ ತಂದೆಗೆ ನೀವು ಹುಟ್ಟಿದ್ದರೆ ಸೈನ್ಯಕ್ಕೆ ನಿಮ್ಮ ಮಕ್ಕಳನ್ನು ಕಳುಹಿಸಿ. ನಾನು ಅವರಿಗೆ ತಿಂಗಳಿಗೆ ಒಂದು ಲಕ್ಷ ಸಂಬಳ ಕೊಡುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಗ್ರಹ ಮಂತ್ರಿಗಳೇ ಸ್ಟೇಟ್ ಮೆಂಟ್ ದೇಶದ ವಿರುದ್ದ ಮಾತನಾಡಿದವನು ನಿಮ್ಮ ಪಕ್ಷದವನು. ಅವನ ಮೇಲೆ ಕೇಸ್ ಹಾಕುತ್ತೀರಾ, ನನ್ನ ಮೇಲೆ ಕೇಸ್ ಹಾಕಿದರು ಯಾವುದೇ ಪರಿಣಾಮ ಬೀರಲ್ಲ ಎಂದರು...
Sign up here to get the latest post directly to your inbox.