ವಿಜಯಪುರದಲ್ಲಿ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ನಾನು ಕುಮಾರ ಸ್ವಾಮಿಗೆ ಟೋಪಿ ಹಾಕಿಲ್ಲ ಬದಲಿಗೆ ಅವರೇ ನನ್ನನ್ನು 2013 ರ ಚುನಾವಣೆ ಬಳಿಕMLC ಮಾಡುವುದಾಗಿ 25 ಕೋಟಿ ಕೇಳಿದ್ದರು ಎಂದು ಸ್ಪೋಟಕ ಮಾಹಿತಿ ನೀಡಿದ್ದಾರೆ.
ಹೌದು ವಿಜಯಪುರದಲ್ಲಿ ಮಾತಾಡಿದ ವಿಜುಪಾಟೀಲ್ ದೇವಾನಂದ ಚವ್ಹಾಣ ಬಿಜೆಪಿ ಸೇರಬೇಕೆಂದು ಧಮಕಿ ಹಾಕಿದ್ದೇನೆಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ನಾನು ಆಪರೇಶನ್ ಕಮಲ ದಲ್ಲಿ ಭಾಗಿಯಾಗಿಲ್ಲ . ಬದಲಿಗೆ ನನ್ನ ಬಳಿಯೇ ವ್ಯವಹರಿಸಿದ್ದು ನೀವು ಎಂದು ತಿರುಗೇಟು ನೀಡಿದ್ದಾರೆ.
ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆ, ಹಲವರನ್ನ ಸಂಘಟಿಸಿದ್ದೇ. ಆದರೇ ಕುಮಾರಸ್ವಾಮಿ ನನ್ನ ಪರವಾಗಿ ನಿಲ್ಲಲಿಲ್ಲ. ಬಬಲೇಶ್ವರ ಮತಕ್ಷೇತ್ರದ ಜನರು ಸಹಕರಿಸಿದರು MLC ಮಾಡ್ಲಿಲ್ಲ ಎದುರಾಗಿ ಕೋಟಿಗಟ್ಟಲೆ ಹಣ ಬೇಡಿಕೆ ಇಟ್ಟವರು ಕುಮಾರಸ್ವಾಮಿ ಎಂದು ಟಾಂಗ್ ನೀಡಿದ್ದಾರೆ.
Sign up here to get the latest post directly to your inbox.