ನನ್ನನ್ನು MLC ಮಾಡಲು ಕುಮಾರಸ್ವಾಮಿ 25 ಕೋಟಿ ಬೇಡಿದ್ದರು ವಿಜುಗೌಡ ಪಾಟೀಲ್...

Sat, Feb 09, 2019


ವಿಜಯಪುರದಲ್ಲಿ  ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್  ನಾನು ಕುಮಾರ ಸ್ವಾಮಿಗೆ  ಟೋಪಿ ಹಾಕಿಲ್ಲ  ಬದಲಿಗೆ ಅವರೇ ನನ್ನನ್ನು 2013 ರ  ಚುನಾವಣೆ ಬಳಿಕMLC ಮಾಡುವುದಾಗಿ 25 ಕೋಟಿ   ಕೇಳಿದ್ದರು ಎಂದು  ಸ್ಪೋಟಕ ಮಾಹಿತಿ ನೀಡಿದ್ದಾರೆ. 


ಹೌದು ವಿಜಯಪುರದಲ್ಲಿ ಮಾತಾಡಿದ  ವಿಜುಪಾಟೀಲ್  ದೇವಾನಂದ ಚವ್ಹಾಣ ಬಿಜೆಪಿ  ಸೇರಬೇಕೆಂದು ಧಮಕಿ ಹಾಕಿದ್ದೇನೆಂದು ಮುಖ್ಯಮಂತ್ರಿ  ಹೇಳಿದ್ದಾರೆ. ಆದರೆ  ನಾನು ಆಪರೇಶನ್  ಕಮಲ ದಲ್ಲಿ  ಭಾಗಿಯಾಗಿಲ್ಲ . ಬದಲಿಗೆ ನನ್ನ ಬಳಿಯೇ ವ್ಯವಹರಿಸಿದ್ದು ನೀವು ಎಂದು ತಿರುಗೇಟು ನೀಡಿದ್ದಾರೆ. 


ನಾನು  ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆ, ಹಲವರನ್ನ ಸಂಘಟಿಸಿದ್ದೇ. ಆದರೇ ಕುಮಾರಸ್ವಾಮಿ ನನ್ನ  ಪರವಾಗಿ  ನಿಲ್ಲಲಿಲ್ಲ.  ಬಬಲೇಶ್ವರ ಮತಕ್ಷೇತ್ರದ ಜನರು ಸಹಕರಿಸಿದರು MLC ಮಾಡ್ಲಿಲ್ಲ  ಎದುರಾಗಿ  ಕೋಟಿಗಟ್ಟಲೆ  ಹಣ ಬೇಡಿಕೆ ಇಟ್ಟವರು ಕುಮಾರಸ್ವಾಮಿ ಎಂದು ಟಾಂಗ್ ನೀಡಿದ್ದಾರೆ.

Like our news?