ನಾನು ದಲಿತ ಎಂಬ ಕಾರಣಕ್ಕೆ ನನಗೆ ಯಾರೂ ಸನ್ಮಾನಿಸಲಿಲ್ಲ ಹಾರ ತುರಾಯಿ ಹಾಕಲಿಲ್ಲ ; ಕೇಂದ್ರ ಸಚಿವ ರಮೇಶ ಜಿಗಜಿಣಗಿ... vijaypura#Mp#BD1News.in

Thu, Jan 24, 2019

ವಿಜಯಪುರ: ನಾನು ದಲಿತ ಎಂಬ ಕಾರಣಕ್ಕೆ ನನಗೆ ಯಾರೂ ಸನ್ಮಾನಿಸಲಿಲ್ಲ , ಹಾರ ತುರಾಯಿ ಹಾಕಲಿಲ್ಲ ನನಗೆ ಸಮಾಜದ ನಡತೆಯೇ ನನ್ನ ಜೀವನದ ಪುಸ್ತಕವಾಗಿದೆ, ನಾನು‌ ಜನರ ಭಾವನೆ ತಿಳಿಯಲು‌ ಸುಮ್ಮನಿದ್ದೇನೆ ಅಷ್ಟೇ ನಾನು ಕೇಂದ್ರದ ಮಂತ್ರಿಯಾದರೂ ಕೂಡಾ ನನಗೆ ಜನರು ಸನ್ಮಾನಿಸಲಿಲ್ಲ.


ನಿವ್ಯಾರಾದರೂ ಕೇಂದ್ರದ ಸಚಿವನಾದರೆ ನಿಮಗೆಷ್ಟು ಸನ್ಮಾನಗಳಿರತಿತ್ತು ಎಂದು ಪರೋಕ್ಷವಾಗಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ವಿರುದ್ಧ ಅಸಮಾಧಾನದ ಮಾತುಗಳನ್ನು ಹೇಳಿದ್ದಾರೆ.

ಆದರೆ ನಾನು ದಲಿತ ಎಂಬ ಕಾರಣಕ್ಕೆ ನನ್ನನ್ನು ಯಾರೂ ಸನ್ಮಾನಿಸಲಿಲ್ಲ. ಜಿಲ್ಲೆಯ ಎಲ್ಲ ರಾಜಕಾರಣಿ ಗಳಿಗಿಂತ ಜಾಸ್ತಿ ಶಕ್ತಿ ನನಗಿದೆ ಇಷ್ಟು ಅವಮಾನವಾದರೂ ದಲಿತ  ಎಂಬ ಕಾರಣಕ್ಕೆ ಎಲ್ಲವನ್ನು ನಾನು ಸಹಿಸಿಕೊಂಡಿದ್ದೇನೆ.

ರಾಜಕೀಯ ಜೀವನದ ನಲವತ್ತು ವರ್ಷ ಎಲ್ಲವನ್ನು ಸಹಿಸಿಕೊಂಡಿದ್ದೇನೆ ಎಂದು ಅಸಮಾಧಾನ ಹೊರ ಹಾಕಿದ ಕೇಂದ್ರ ಸಚಿವ ರಮೇಶ ಜಿಗಜಿಣಗಿ.

2019ರ ವಿಜಯಪುರ ಲೋಕಸಭೆ ಚುನಾವಣೆಗೆ ರಮೇಶ ಗೆ  ಟಿಕೇಟ್ ನೀಡಬಾರದು ಎಂದು ಯತ್ನಾಳ ಬೆಂಬಲಿಗರಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ  ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Like our news?