ಹಿಂದಿನಿಂದಲೂ ಸುಳ್ಳಾಗದ ಸದಾಶಿವ ಮಠದ ಕಾರ್ಣಿಕ್ ; ಈ ವರ್ಷದ ಕಾರ್ಣಿಕ್ ನುಡಿದ ಶಿವಯ್ಯ ಅಜ್ಜ..! #Karnataka #Vijayapur #Matha #Spiritual #News

Fri, Apr 16, 2021

ವಿಜಯಪುರ : ಹಿಂದಿನಿಂದಲೂ ಸುಳ್ಳಾಗದ ಸದಾಶಿವ ಮಠದ ಕಾರ್ಣಿಕ್ ಪ್ರತಿ ವರ್ಷ ಅಚ್ಚರಿ, ಹೌದು ವಿಜಯಪುರ ಜಿಲ್ಲೆಯ ಕತ್ನಳ್ಳಿ ಗ್ರಾಮದ ಶ್ರೀ ಸದಾಶಿವ ಮುತ್ಯಾನ ಮಠದ ಪ್ರತಿಯೊಂದು ಕಾರ್ಣಿಕ್ ಪ್ರತಿ ವರ್ಷವೂ ಅಚ್ಚರಿಗೆ ಕಾರಣವಾಗಿದೆ.


ಪ್ರತಿ ವರ್ಷ ಯುಗಾದಿ ಅಂಗವಾಗಿ ಕತ್ನಳ್ಳಿ ಗ್ರಾಮದ ಸದಾಶಿವ ಮುತ್ಯಾನ ಮಠದ ಜಾತ್ರೆ  ನೂರಾರು ಭಕ್ತರ ಸಮೂಹದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯುತ್ತದೆ , ಜಾತ್ರೆಗೆ ಬರುವ ಭಕ್ತರಿಗೆ ವರ್ಷದಲ್ಲಿ ಮುಂದೆ ನಡೆಯುವ ಘಟನೆಗಳು ಕುರಿತು ಭವಿಷ್ಯವಾಣಿಯನ್ನು ಮಠದ ಶಿವಯ್ಯ ಸ್ವಾಮೀಜಿ ಕಾರ್ಣಿಕ್ ನುಡಿಯವುದು ಜಾತ್ರೆಯ ಮತ್ತೊಂದು ವಿಶೇಷ ಈ ಹಿಂದೆಯೂ 2013 ರಲ್ಲಿ ಚಹಾ ಮಾರುವವ ದೇಶದ ಚುಕ್ಕಾಣಿ ಹಿಡಿಯುತ್ತಾನೆ ಎಂದು ಭವಿಷ್ಯ ನುಡಿದಿದ್ದರು, ಕಳೆದೆರಡು ವರ್ಷಗಳ ಹಿಂದೆ ವೈದ್ಯರು ತಲೆಗೆ ಕೈ ಹಚ್ಚಿಕೊಳ್ಳವ ಸ್ಥಿತಿ ಬರುವುದು ಎಂದು ರೋಗರುಜನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು ಶಿವಯ್ಯ ಅಜ್ಜ  ಕೊರೊನಾ ಮಹಾಮಾರಿಯ ಮುನ್ಸೂಚನೆ ನೀಡಿದ್ದರು ಎಂಬುದು ಭಕ್ತರು ನಂಬಿಕೆ.


ಈ ಬಾರಿ ಭವಿಷ್ಯ ನುಡಿದಿರುವ ಕಾರ್ಣಿಕ ಶಿವಯ್ಯ ಸ್ವಾಮೀಜಿ, ಮುಂದಿನ ಒಂದು ವರ್ಷದಲ್ಲಿ ನಡೆಯುವ ಘಟನೆಗಳ ಬಗ್ಗೆ ಹೇಳಿಕೆ ನೀಡಿದ್ದಾರೆ.


ಕಳೆದ ವರ್ಷ ಜಾತ್ರೆ ನಡೆಯದ ಬಗ್ಗೆ  ಭಕ್ತರು ಮತ್ತು ಸದಾಶಿವ ಮಠದ ಮಧ್ಯೆ ಹೋದ ವರ್ಷ ಆಕಳು ಕರುವನ್ನು ಮತ್ತು ಕರು ಆಕಳನ್ನು ಕಳೆದುಕೊಂಡಂಥ ಪರಿಸ್ಥಿತಿ ಎದುರಾಗಿತ್ತು. ನಾನು ಇಲ್ಲಿ ಮಠದವರೆಗೆ ಬಂದು ಹೋಗಿದ್ದೆ ಆದರೆ, ಕೊರೊನಾದಿಂದಾಗಿ ಜಾತ್ರೆಯನ್ನು ಕೇವಲ ಸಾಂಕೇತಿಕವಾಗಿ ಆಚರಿಸಲಾಗಿತ್ತು ಎಂದು ಸ್ಮರಿಸಿದರು. ಈಗ ಪರಮಾತ್ಮ ಕೊರೊನಾ ರೂಪದಲ್ಲಿ ತನ್ನ ಆಟ ಆಡಿವಾಡಿಸುತ್ತಿದ್ದಾನೆ,  ಅವನೇ ಎಲ್ಲವನ್ನೂ ಕಾಪಾಡುತ್ತಾನೆ. ಈಗ ಇರುವುದು ಸಾಮಾನ್ಯ ಪರೀಕ್ಷೆ, ಈಗಿರುವ ಕೊರೊನಾ ಇತರ ರೋಗಗಳಂತೆ ಪ್ರಭಾವ ಕಡಿಮೆಯಾದರೂ ಉಳಿಯಲಿದೆ. ಮುಂದೆ ಬರುವ ಬೆಸುಗೆ ಕಾಲ ಯಾರನ್ನು ಬೆಸುಗೆ ಮಾಡುತ್ತೋ? ಯಾರನ್ನು ಬೇರ್ಪಡಿಸುತ್ತೋ? ಗೊತ್ತಿಲ್ಲ ಎಂದು ಭವಿಷ್ಯದ ಕಾರ್ಣಿಕ್  ನುಡಿದಿದ್ದಾರೆ.

Like our news?