ವಿಜಯಪುರ : ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದಲ್ಲಿರುವ ಚಂದ್ರಗಿರಿ ಮೂಲ ಮಹಾ ಸಂಸ್ಥಾನ ಮಠದ ಶ್ರೀ ಗುರು ಚಕ್ರವರ್ತಿ ಸದಾಶಿವ ಮುತ್ಯಾನ ಜಾತ್ರೆ ಮಾರ್ಚ 13 ರಿಂದ ಮೂರು ದಿನಗಳ ಕಾಲ ನಡೆಯಲಿದೆ , ಪ್ರತಿ ವರ್ಷ 5 ದಿನಗಳ ಕಾಲ ನಡೆಯುತ್ತಿತ್ತು ಆದರೆ ಈ ಬಾರಿ ಕೊವಿಡ್ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.
ಸದಾಶಿವ ಮುತ್ಯಾನ ಜಾತ್ರೆ ವಿಶೇಷ...
ಬಬಲಾದಿ ಸದಾಶಿವ ಮುತ್ಯಾನ ಜಾತ್ರೆ ಎಂದರೆ ಮೊದಲು ನೆನಪಾಗೋದೆ ಮದ್ಯದ ಜಾತ್ರೆ ಎಂದು , ಯಾಕೆಂದರೆ ಬಬಲಾದಿ ಸದಾಶಿವ ಮುತ್ಯಾನಿಗೆ ಭಕ್ತರು ಮದ್ಯವನ್ನು ನೈವೇದ್ಯವಾಗಿ ಅರ್ಪಿಸುವ ಮತ್ತು ಮದ್ಯವನ್ನೇ ಪ್ರಸಾದವಾಗಿ ಸ್ವೀಕರಿಸುವ ಸಂಸ್ಕೃತಿ ಬಹುವರ್ಷಗಳಿಂದ ನಡೆದು ಬಂದಿದೆ ಈ ಹಿನ್ನಲೆಯಲ್ಲಿ ಸಾವಿರಾರು ಭಕ್ತರು ಸಹ ರಾಜ್ಯದ ಎಲ್ಲಾ ಭಾಗಗಳಿಂದ ಆಗಮಿಸುತ್ತಾರೆ...
ಜಾತ್ರೆಯಂದು ಕಾಲಜ್ಞಾನ ನುಡಿಯುವ ಮಠದ ಪೀಠಾಧಿಪತಿ ಸಿದ್ರಾಮಯ್ಯ ಹೊಳಿಮಠ...
ವರ್ಷಾನು ವರ್ಷಗಳಿಂದ ಬಬಲಾದಿ ಮಠದ ಕಾಲಜ್ಞಾನ ಯಾವತ್ತೂ ಸುಳ್ಳಾಗಿಲ್ಲ , ಮತ್ತು ರಾಜ್ಯದ ಗಮನ ಸೆಳದಿದೆ, ಮಳೆ-ಬೆಳೆ , ರೋಗ-ರುಜನೆ , ಪ್ರಚಲಿತ ವಿದ್ಯಮಾನಗಳು ಮತ್ತು ರಾಜಕೀಯ ವಲಯದ ಬೆಳವಣಿಗೆ ಕುರಿತು ಸಾವಿರಾರು ವರ್ಷಗಳ ಹಿಂದೆಯೇ ಕರಿಕಲ್ಲಿನ ಬಿಳಿಗೆರೆಯ ಮೇಲೆ ಬರೆದಿಡಲಾಗಿದೆಯಂತೆ ಅದರಂತೆ ಪ್ರತಿ ವರ್ಷ ಜಾತ್ರೆಯ ಸಮಯದಲ್ಲಿ ಮಠದ ಈಗಿನ ಪೀಠಾಧಿಪತಿ ಸಿದ್ರಾಮಯ್ಯ ಕಾಲಜ್ಞಾನ ನುಡಿಯುತ್ತಾರೆ.
Sign up here to get the latest post directly to your inbox.