ವಿರಕ್ತಮಠದ ಚೆನ್ನಮಲ್ಲ ಶಿವಯೋಗಿಗಳ 63ನೇ ಪುಣ್ಯಸ್ಮರಣೋತ್ಸವ ಆಚರಣೆ... Maski#swmyji#fastival....

Fri, Dec 28, 2018

ಮಸ್ಕಿ: ತಾಲೂಕಿನ ಮೆದಕೀನಾಳ ಗ್ರಾಮದಲ್ಲಿ ವಿರಕ್ತಮಠದ ಲಿಂ.ಚೆನ್ನಮಲ್ಲ ಶಿವಯೋಗಿಗಳ 63ನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಜರುಗಿತು.


ಗ್ರಾಮದ ತಾತಪ್ಪನ ಪಾದಗಟ್ಟಿಯಿಂದ ಆರಂಭಗೊಂಡ ಚೆನ್ನಮಲ್ಲ ಶಿವಯೋಗಿಗಳ ಭಾವಚಿತ್ರಮೇರವಣಿಗೆಗೆ ಮಠಾಧ್ಯಕ್ಷರಾದ ಡಾ.ಚೆನ್ನಮಲ್ಲ ಸ್ವಾಮೀಜಿ ಪೂಜಾ ಕೈಂಕರ್ಯ ನೇರವೇರಿಸಿ ಪುಷ್ಪಾರ್ಚನೆ ಮಾಡುವುದರಮೂಲಕ ಮೇರವಣಿಗೆಗೆ ಚಾಲನೆ ನೀಡಿದರು ಗ್ರಾಮದ ಸುಮಂಗಲೆಯರು ಪೂರ್ಣ ಕುಂಭೋತ್ಸವ ದೊಂದಿಗೆ ಸಮ್ಮಾಳ, , ಭಜನಾ ಮೇಳ ಸೇರಿದಂತೆ ಹಲವು ಮಂಗಳ ವಾದ್ಯಗಳೊಂದಿಗೆ ಹೊರಟ   ಮೇರವಣಿಗೆ ಗ್ರಾಮದ ಪ್ರಮುಖಬೀದಿಗಳಲ್ಲಿ  ಸಂಚರಿಸಿ  ಮಠವನ್ನು ತಲುಪಿ ಸಂಪನ್ನಗೊಂಡಿತು.


ನಂತರ ಡಾ.ಚೆನ್ನಮಲ್ಲ ಶಿವಯೋಗಿ ಸ್ವಾಮೀಜಿಯವರ ಪಾದಗಳಿಗೆ ಜಲಾಭೀಷೇಕ ಷೋಡಶೋಪಾಚಾರದೊಂದಿಗೆ ಪಾದ ಪೂಜೆ ಜರುಗಿಸಿ ಅನ್ನ ಸಂತರ್ಪಣೆ ನೇರವೇರಿಸಲಾಯಿತು.

ಮೇರವಣಿಗೆಯಲ್ಲಿ  ಡಾ.ಚೆನ್ನಮಲ್ಲ ಸ್ವಾಮೀಜೀ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಮಕ್ಕಳು ಗಜಾನನ ಯುವಕಮಂಡಳಸದಸ್ಯರು ಭಜನಾ ಮಂಡಳದವರು  ಶ್ರೀಮಠದ ಜಾತ್ರಾಮಹೋತ್ಸವ ಸೇವಾಸಮಿತಿ ಸದಸ್ಯರು ಗ್ರಾಮ ಪಂಚಾಯತ ಅಧ್ಯಕ್ಷರು ಸರ್ವ ಸದಸ್ಯರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಭಾಗವಹಿಸಿದ್ದರು.  ಮೇರವಣಿಗೆಯೂದ್ದಕ್ಕೂ ಭಕ್ತರ ಜಯಘೋಷ ಮುಗಿಲುಮುಟ್ಟುವಂತಿತ್ತು.


ವರದಿ: ಗುರುಶಾಂತಸ್ವಾಮಿ ಹಿರೇಮಠ್

Like our news?