ಬೆಂಗಳೂರು : ಸಚಿವ ಸ್ಥಾನ ಸಿಗದೆ ಹತಾಶರಾಗಿ ಯತ್ನಾಳ್ ಹುಚ್ಚು ಹುಚ್ಚಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಟೀಕಿಸಿದ್ದಾರೆ...
ಹೌದು, ಯತ್ನಾಳ್ ಮುಖ್ಯಮಂತ್ರಿ ಬದಲಾವಣೆ ಕುರಿತು ನೀಡಿರುವ ಹೇಳಿಕೆಗೆ ರೇಣುಕಾಚಾರ್ಯ ಪ್ರತಿಕ್ರಿಯಿಸಿ - ಕೆಲವು ವೀರಶೈವ ಮುಖಂಡರು ಅಧಿಕಾರ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಾರೆ ಅವರಿಗೆ ಅಧಿಕಾರ ಕೊಟ್ಟವರು ಯಾರು? ಎಂದು ಗುಡುಗಿದರು...
ಯಡಿಯೂರಪ್ಪ ಕೇವಲ ವೀರಶೈವ ಲಿಂಗಾಯತ ಸಮುದಾಯಕ್ಕೆ ಮಾತ್ರ ಸೇರಿದವರಲ್ಲ.. ಎಲ್ಲಾ ಸಮಾಜಕ್ಕೆ ಸೇರಿದ ಪ್ರಶ್ನಾತೀತ ನಾಯಕ... ಆದರೆ ಯತ್ನಾಳ್ ಸಚಿವ ಸ್ಥಾನ ಸಿಗದ ಹತಾಶೆಯಲ್ಲಿ ಹುಚ್ಚನಂತೆ ಮಾತಾಡುತ್ತಾರೆ... ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಶಾಸಕರೆಲ್ಲರೂ ಒತ್ತಾಯ ಮಾಡುತ್ತೇವೆ ಎಂದು ರೇಣುಕಾಚಾರ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ...
Sign up here to get the latest post directly to your inbox.