ವಿಜಯಪುರ: ಪ್ರೀತಿಸುವದಾಗಿ ನಂಬಿಸಿ ಕಳೆದ ಮೂರು ವರ್ಷಗಳ ಕಾಲ ದೈಹಿಕವಾಗಿ ಬಳಸಿ ಈಗ ಬೇರೊಂದು ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಯುವಕನ ವಿರುದ್ಧ ಯುವತಿಯೋರ್ವಳು ಸಿಡಿದೆದ್ದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ಈ ಹಿನ್ನಲೆಯಲ್ಲಿ ಆತನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಯುವತಿಯೊರ್ವಳು ಕಣ್ಣೀರು ಹಾಕುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೀತಿಸಿ ಕೈಕೊಟ್ಟ ಯುವಕ ಹಾಗೂ ಆತನ ಕುಟುಂಬ ಸದಸ್ಯರು ಇನ್ನಿಬ್ಬರ ವಿರುದ್ಧ ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ ನಗರದ ವಡ್ಡರ ಗಲ್ಲಿ ನಿವಾಸಿ ಸವಿತಾ ಬಂಡಿವಡ್ಡರ್ (೨೩) ಎಂಬ ಯುವತಿ ಅದೇ ಬಡಾವಣೆಯ ಪರಶುರಾಮ ಹೊಸಪೇಟೆ ಎಂಬ ಯುವಕನನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದಳಂತೆ. ಮೊದಲು ಆಕೆಯನ್ನ ಮೊಸಗೊಳಿಸಿ ದೈಹಿಕ ಸಂಪರ್ಕ ಹೊಂದಿ,ನಂತರ ತನ್ನ ಬಳಿ ಈ ಕುರಿತು ದಾಖಲೆಗಳಿವೆ ಎಂದು ಬೆದರಿಸಿ ಮೂರು ವರ್ಷಗಳ ಕಾಲ ಆಕೆಯೊಂದಿಗೆ ದೈಹಿಕ ಸಂಪರ್ಕ ಕೂಡಾ ಮಾಡಿ ಈಗ ಬೆರೋಂದು ಯುವತಿಗೆ ಮದುವೆಯಾಗಲು ಹೊರಟಿದ್ದಾನೆಂದು ಆರೋಪಿಸಲಾಗಿದೆ. ಇದೀಗ ತನಗೆ ಕೈಕೊಟ್ಟು ಬೇರೊಂದು ಮದುವೆಯಾಗಲು ಹವಣಿಸುತ್ತಿದ್ದು, ಪ್ರಶ್ನಿಸಿದ್ದಕ್ಕೆ ಕುಟುಂಬ ಸದಸ್ಯರೆಲ್ಲ ಸೇರಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ. ತನಗೆ ರಕ್ಷಣೆ ನೀಡಬೇಕೆಂದು ಸಹ ಆಗ್ರಹಿಸಿದ್ದಾಳೆ.
ಈ ಕುರಿತು ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಅವರ ಬಳಿ ಕೂಡಾ ಸಂಧಾನ ನಡೆಸಲಾಗಿದೆ ಅಲ್ಲಿಯೂ ನ್ಯಾಯ ಸಿಗಲಿಲ್ಲ ಎಂಬುದು ಯುವತಿಯ ಆರೋಪವಾಗಿದೆ. ಈ ಕುರಿತು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋದರೆ ಅವರು ಸಹ ಪ್ರಕರಣ ದಾಖಲಿಸಿಕೊಳ್ಳಲ್ಲ ಹೀಗಾಗಿ ಮಾದ್ಯಮದವರ ಮೂಲಕ ತನಗೆ ನ್ಯಾಯ ಬೇಕು ಎಂದು ನೋಂದ ಯುವತಿ ಸವಿತಾ ಕಣ್ಣೀರು ಹಾಕಿದ್ದಾಳೆ. ಇಷ್ಟೆಲ್ಲಾ ಪ್ರಹಸನದ ಬಳಿಕ ಇದೀಗ ಈ ಕುರಿತು ಇದೀಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
Sign up here to get the latest post directly to your inbox.