ಭಾರತ ಹಲವು ವಿಸ್ಮಯಗಳ ತಾಣ ಇಲ್ಲಿನ ಪರಂಪರೆ , ಆಧುನಿಕ ತಂತ್ರಜ್ಞಾನ ಔಚಿತ್ಯಕ್ಕೆ ಸವಾಲು ಎಸೆಯುವಂತಿದೆ... ಈ ನಿಟ್ಟಿನಲ್ಲಿ ನಮ್ಮೆಲ್ಲರಿಗೂ ತಿಳಿಯದ ಒಂದು ಕುತೂಹಲಕಾರಿ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.....
ವಿಶ್ವದ ಏಕೈಕ ತೇಲುವ ಅಂಚೇಕಛೇರಿ ಭಾರತಲ್ಲಿದೆ... ಹೌದು , ಅಚ್ಚರಿ ಎನಿಸಿದರೂ ಇದು ನಿಜ... ಈಗಾಗಲೇ ಬಹುಜನರ ಆಕರ್ಷಣೀಯವಾಗಿರುವ ಈ ಅಂಚೇಕಛೇರಿ ಫ್ಲೋಟಿಂಗ್ ಪೋಸ್ಟ್ ಆಫೀಸ್ ಎಂದೆ ಪ್ರಸಿದ್ಧಿಯಾಗಿದೆ...
ಈ ಕಛೇರಿ ಇರುವುದಾದರೂ ಎಲ್ಲಿ ?
ವಾಸ್ತುಶಿಲ್ಪದ ಈ ವಿಶೇಷ ತುಣುಕು ಶ್ರೀನಗರದ ದಾಲ್ ಸರೋವರದ ಮೇಲಿದೆ..
2011 ರಲ್ಲಿ ಇದನ್ನು ಉದ್ಘಾಟಿಸಿದ ಕೀರ್ತಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಮತ್ತು ಐಟಿ ಸಚಿವ ಸಚಿನ್ ಪೈಲಟ್ ಸಲ್ಲುತ್ತದೆ... ಹೌದು , ಈ ಪೋಸ್ಟ್ ಆಫೀಸ್ ಶ್ರೀನಗರದ ಬಹುಕಾಂತೀಯ ದಾಲ್ ಸರೋವರದ ನೀರಿನ ಮೇಲೆ ತೇಲುತ್ತಿದೆ... ಅದರಲ್ಲೂ ಅಂಚೆಕಛೇರಿಯ ಅಧಿಕೃತ ಕೆಂಪು ಮತ್ತು ಹಳದಿ ಲೋಗೋ ಹಿಮಚ್ಛಾದಿತ ಪ್ರದೇಶದಲ್ಲಿ ಕಾಣುವುದೆ ಕಣ್ಣಿಗೆ ಹಬ್ಬ...
ಆಧುನಿಕ ಸೌಲಭ್ಯದ ಲಭ್ಯತೆ : -
ಇಲ್ಲಿನ ಅಂಚೆಚೀಟಿಗಳು ದಾಲ್ ಸರೋವರದ ಚಿತ್ರವನ್ನು ಒಳಗೊಂಡಿರುತ್ತದೆ.. ನೀವಿಲ್ಲಿ ಕೇವಲ ಪೋಸ್ಟ್ ಮಾಡಲು ಮಾತ್ರವಲ್ಲ ಇಂಟರ್ನೆಟ್, ಅಂತರಾಷ್ಟ್ರೀಯ ಫೋನ್ ಸೌಲಭ್ಯಗಳನ್ನು ಪಡೆದುಕೊಳ್ಳಲು ಅವಕಾಶವಿದೆ... ವಿಶೇಷವಾಗಿ ಅಂಚೆಚೀಟಿಗಳ ಸಂಗ್ರಹಾಲಯ ಪ್ರವಾಸಿಗರ ಕೇಂದ್ರ ಆಕರ್ಷಣೆಬಿಂದು ಎಂದರೆ ತಪ್ಪಾಗಲಾರದು...
ಒಟ್ಟಾರೆಯಾಗಿ ; ವಿಭಿನ್ನ ವಾಸ್ತುಶಿಲ್ಪವಾಗಿರುವುದರಿಂದ, ಈ ಫ್ಲೋಟಿಂಗ್ ಪೋಸ್ಟ್ ಆಫೀಸ್ ಪ್ರಕೃತಿಯ ಕಲಾಕೃತಿಗೆ ಒಂದು ರೀತಿಯ ಕಳಶಪ್ರಾಯವಾಗಿದೆ ಎಂಬುದು ಅತಿಶಯೋಕ್ತಿಯಲ್ಲ....
ನಮ್ಮ ದೇಶ ನಮ್ಮ ಹೆಮ್ಮೆ....
Sign up here to get the latest post directly to your inbox.