ನಾಳೆಯಿಂದ ಲಾಕ್ ಡೌನ್ ಮತ್ತಷ್ಟು ಬಿಗಿ ; ಉ-ಪ್ರದೇಶದ ಮಾದರಿಯಂತೆ ಆಸ್ತಿ ಮುಟ್ಟುಗೋಲು...! #Karnataka #CMBSY #LockDown...

Mon, Apr 20, 2020

ಬೆಂಗಳೂರು : ನಾಳೆಯಿಂದ ಇನ್ನೂ ಟಫ್  ಲಾಕ್ ಡೌನ್ ಕೇಂದ್ರದ ಮಾರ್ಗಸೂಚಿಯಂತೆ  ಮೇ 3 ರ ವರೆಗೆ ಯಾವುದೇ ಸಡಿಲಿಕೆಯಿಲ್ಲ ಎಂದು ಇಂದು ಕ್ಯಾಬಿನೆಟ್ ಸಭೆಯಲ್ಲಿ ನಿರ್ದರಿಸಲಾಗಿದೆ.


ಹೌದು ಮೊನ್ನೆಯಷ್ಟೇ ಕೆಲವು  ವಿನಾಯಿತಿ ಘೋಷಿಸಿತ್ತು ಅದ್ಕೇಲ್ಲಾ ಇದೀಗ ಬ್ರೇಕ್ ಬಿದಿದ್ದು ನಾಳೆಯಿಂದ  ರೆಡ್ ಜೋನ್ ಗಳಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವಂತೆ ಕ್ಯಾಬಿನೆಟ್ ಸಂಪುಟ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಆದೇಶ ಮಾಡಿದ್ದಾರೆ. ಇನ್ನೂ  ರೈತರಿಗೆ ಯಾವುದೇ ನಿರ್ಬಂಧಗಳಿಲ್ಲ ,ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ  ವಿನಾಯಿತಿ ಹೊರತು ಪಡಿಸಿ  ಬೇರೆ ಯಾವುದೇ ವಿಭಾಗಕ್ಕೆ ವಿನಾಯಿತಿ ಇಲ್ಲ , ಕೊರೊನ್ ವಾರಿಯರ್ಸ್ ಮೇಲೆ ಯಾರಾದರೂ ಹಲ್ಲೆ ನಡೆಸಿದ್ರೆ.ಕಠಿಣ ಕ್ರಮ,  ಉತ್ತರ ಪ್ರದೇಶದ ಮಾದರಿಯಂತೆ ಸಾರ್ವಜನಿಕ ಆಸ್ತಿಗಳನ್ನು ಹಾಳು ಮಾಡುವರ ಆಸ್ತಿ ಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಠಿಣ ಕ್ರಮ ಕೈಗೊಳ್ಳಲು ಸುಗ್ರೀವಾಜ್ಞೆಯನ್ನು ಸಿಎಂ ಬಿ.ಎಸ್ ಯಡಿಯೂರಪ್ಪ ಹೊರಡಿಸಿದ್ದಾರೆ.

Like our news?