ಆರ್ಟಿಕಲ್ 370 ರದ್ದು ಹಿನ್ನೆಲೆ ಜೈ ನರೇಂದ್ರ ಮೋದಿ ಎಂದ ಕೆ.ಎಸ್ ಭಗವಾನ್.... Article 370#K.S.Bhagvan...

Tue, Aug 06, 2019

ಬೆಂಗಳೂರು : ವಿಚಾರವಾದಿ ಮತ್ತು ಸಾಹಿತಿಯಾದ ಕೆ.ಎಸ್ ಭಗವಾನ್ ಪತ್ರಿಕಾ ಪ್ರಕಟಣೆ ಒಂದನ್ನು ಹೊರಡಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ ಹೌದು ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಭಗವಾನ್ ಆರ್ಟಿಕಲ್ 370 ರದ್ದು ಬಳಿಕ ಪ್ರತಿಕ್ರಿಯೆ ನೀಡಿ ಪತ್ರಿಕಾ ಪ್ರಟಕಣೆ ಹೊರಡಿಸಿದ್ದಾರೆ ಅದುವೇ ಜೈ ನರೇಂದ್ರ ಮೋದಿ ಎಂದು..

          ಪ್ರಕಟಣೆಯ ಕೃಪೆಗಾಗಿ...

ಸುಮಾರು 72 ವರ್ಷಗಳಿಂದ ಸಂಕಟದಲ್ಲಿ ನರಳುತ್ತಿದ್ದ ಕಾಶ್ಮೀರದ ಜನತೆಯನ್ನು ನಮ್ಮ ನೆಚ್ಚಿನ ಪ್ರಧಾನ ಮಂತ್ರಿಯವರು ಆರ್ಟಿಕಲ್ 370ಅನ್ನು ರದ್ದು ಮಾಡುವ ಮೂಲಕ ರಾಷ್ಟ್ರವನ್ನು ಸಂತಸಪಡಿಸಿದ್ದಾರೆ. ಪ್ರತಿದಿನ ಏನಿಲ್ಲ ಅಂದರೂ 7 - 8 ಕೋಟಿ ರೂಪಾಯಿಗಳು ವ್ಯರ್ಥವಾಗಿ ಖರ್ಚಾಗುತ್ತಿದ್ದವು. ಅದನ್ನು ಜನತೆಯ ಕಲ್ಯಾಣಕ್ಕಾಗಿ ಅಭಿವೃದ್ಧಿಗಾಗಿ ಇನ್ನು ಮುಂದೆ ಬಳಸಲು ಅನುಕೂಲವಾಗುತ್ತದೆ.                                  

ಆರ್ಟಿಕಲ್ 370 ಅನ್ನು ರದ್ದು ಮಾಡುವುದರ ಮುಖಾಂತರ ಪ್ರಧಾನಿ ಮೋದಿ ಮತ್ತು ಅವರ ಕೇಂದ್ರ ಸರ್ಕಾರ ಇಡೀ ದೇಶವನ್ನು ಒಂದೇ ಸಂವಿಧಾನದಡಿ ತಂದಿರುವುದು ಬಹಳ ಶ್ಲಾಘನೀಯವಾದ ಕಾರ್ಯ. ಇದಕ್ಕಾಗಿ ಇಡೀ ರಾಷ್ಟ್ರ ತಹತಹಪಡುತ್ತಿತ್ತು. ಸನ್ಮಾನ್ಯ ಮೋದಿ ಅವರು ಇತಿಹಾಸದಲ್ಲಿ ಅಜರಾಮರವಾಗಿ ಉಳಿಯುತ್ತಾರೆ ಎನ್ನಲು ಸಂತೋಷ ಮತ್ತು ಹೆಮ್ಮೆ ಆಗುತ್ತದೆ. 


ಜೈ ನರೇಂದ್ರ ಮೋದಿ!                         

06-08-2019 

ಮೈಸೂರು.            

ಕೆ.ಎಸ್.ಭಗವಾನ್. 

ವಿಚಾರವಾದಿಗಳು ಹಾಗೂ ಸಾಹಿತಿಗಳು

Like our news?