ಗೋಕಾಕ್ ಪಟ್ಟಣಕ್ಕೆ ನುಗ್ಗಿದ ನೀರು; ಪ್ರವಾಹದ ಭೀತಿಯಿಂದ ಪರದಾಡುತ್ತಿದ್ದಾರೆ ಜನ...Goal water flod

Tue, Aug 06, 2019

ಗೋಕಾಕ್:ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮತ್ತು ಮಹಾರಾಷ್ಟ್ರದ ಕೊಯ್ನಾ ಡ್ಯಾಂ, ಜೊತೆಯಲ್ಲಿಯೆ ಹಿಡಕಲ್ ಜಲಾಶಯದಿಂದ 30 ಸಾವಿರ ಕ್ಯೂ ಸೆಕ್ಸ ನೀರನ್ನು ಘಟಪ್ರಭಾ ನದಿಗೆ ಹರಿದು ಬಿಟ್ಟಿದ್ದರಿಂದ ಗೋಕಾಕ ಪಟ್ಟಣಕ್ಕೆ ನೀರು ನುಗ್ಗಿದೆ ಇದರ ಪರಿಣಾಮ ಪಟ್ಟಣದ ಡೋರಗಲ್ಲಿ,


ಮಟಣ ಮಾರ್ಕೇಟ್, ಪೀಶ್ ಮಾರ್ಕೇಟ್ ಜಲಾವೃತಗೊಂಡು ಗೋಕಾಕ ಆದಿಜಾಂಬವ ನಗರದಲ್ಲಿ ಮನೆಗಳು ಕೂಡ ಬಿದ್ದಿವೆ  ಇದರಿಂದ ಇಲ್ಲಿನ ಜನರು ಪರದಾಡುವ ಪರಿಸ್ಥಿತಿ ಬಂದಿದೆ, 


ಅದಲ್ಲದೆ  ಗೋಕಾಕದಿಂದ ಘಟಪ್ರಭಾ ಕಡೆಗೆ ಹೋಗುವ ಲೋಳಸೂರ ಸೇತುವೆ, ಕೊಣ್ಣೂರ, ಪಾಲ್ಸ ಕಡೆಗೆ ಹೋಗುವ ಮಾರ್ಕಂಡೆಯ ಸೇತುವೆ  ಸಂಪೂರ್ಣ ಜಲಾವೃತಗೊಂಡಿದ್ದರಿಂದ ಪೋಲಿಸ ಇಲಾಖೆಯವರು ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದಾರೆ,


ಘಟಪ್ರಭಾ ನದಿಯಿಂದ ರಬಸದಿಂದ ಹರಿದು ಬರುತ್ತಿರುವ ನೀರಿಗೆ ಕೊಣ್ಣೂರ ಪಟ್ಟಣದಲ್ಲಿ ನೀರಿನಲ್ಲಿ ಸಿಲುಕಿರುವ ಜಾನುವಾರವನ್ನು ಇಲ್ಲಿನ ಸಾರ್ವಜನಿಕರು ಕ್ರೇನ್ ಮುಖಾಂತರ ಮೇಲಕ್ಕೆತ್ತಿ ಜಾನುವಾರಿನ ಪ್ರಾಣ ಉಳಿಸಿದ್ದಾರೆ...

Like our news?
Copyrights

*