ವಿಶ್ವದೆಲ್ಲೆಡೆ ಸರ್ವರ್ ಡೌನ್ ಆಗಿದ್ದ ಹಿನ್ನೆಲೆಯಲ್ಲಿ ಫೇಸ್ಬುಕ್ಸ್ , ವಾಟ್ಸಪ್, ಇನ್ಸ್ಟಾಗ್ರಾಮ್ ಸರಿಯಾಗಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ನೆಟ್ಟಿಗರಿಂದ ಆಕ್ರೋಶ ಮತ್ತು ರೂಮರ್ ಗಳನ್ನು ಹಬ್ಹಿಸಲಾಗುತ್ತಿತು ಆದರೆ ಇಂದು ಬೆಳಿಗ್ಗೆ ಇಂದ ಮತ್ತೆ ಎಂದಿನಂತೆ ಕೆಲಸ ಮಾಡುತ್ತಿವೆ.
ಈ ಬಗ್ಗೆ ಫೇಸ್ಬುಕ್ ಇಂದು ಬೆಳಗ್ಗೆ ಸ್ಪಷ್ಟನೆ ನೀಡಿ, ನಮ್ಮ ಕೆಲ ಬಳಕೆದಾರರಿಗೆ ಫೋಟೋ, ವಿಡಿಯೋ ಅಪ್ಲೋಡ್ ಮತ್ತು ಕಳುಹಿಸಲು ಕಷ್ಟವಾಗಿತ್ತು. ಈಗ ಈ ಸಮಸ್ಯೆ ಬಗೆಹರಿದಿದ್ದು ನಾವು ಮರಳಿ ಬಂದಿದ್ದೇವೆ ಎಂದಿದ್ದಾರೆ
ಈ ತೊಂದರೆ ಆಗಿದ್ದಕ್ಕೆ ಕ್ಷಮೆ ಕೇಳುತ್ತೇವೆ ಎಂದು ಟ್ವೀಟ್ ಮಾಡಿದೆ ನಮ್ಮ ಕೆಲ ಬಳಕೆದಾರರಿಗೆ ಫೋಟೋ, ವಿಡಿಯೋ ಅಪ್ಲೋಡ್ ಮತ್ತು ಕಳುಹಿಸಲಾಗುತ್ತಿಲ್ಲಾ ಎನ್ನುವ ವಿಚಾರ ನಮ್ಮ ಗಮನಕ್ಕೆ ಬಂದ ತಕ್ಷಣ ಈ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದು ಫೇಸ್ಬುಕ್ ಬುಧವಾರ ರಾತ್ರಿ ತಿಳಿಸಿತ್ತು.
ಬುಧವಾರ ರಾತ್ರಿ 7.30 ರಿಂದ ವಿಶ್ವಾದ್ಯಂತ ಫೇಸ್ಬುಕ್, ವಾಟ್ಸಪ್, ಇನ್ ಸ್ಟಾಗ್ರಾಮ್ ಯಾವುದೇ ಫೋಟೋ, ವಿಡಿಯೋ ಓಪನ್ ಆಗುತ್ತಿರಲಿಲ್ಲ. ಸರ್ವರ್ ಡೌನ್ ಆದ ಕೂಡಲೇ ಜನ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು. ಈ ರೀತಿ ಡೌನ್ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಡೌನ್ ಆಗಿತ್ತು. ಯಾವ ಕಾರಣಕ್ಕೆ ಸಮಸ್ಯೆ ಆಗಿದೆ ಎನ್ನುವುದನ್ನು ಫೇಸ್ಬುಕ್ ತಿಳಿಸಿಲ್ಲ.
Sign up here to get the latest post directly to your inbox.