ನಾನು ನಿರ್ಗತಿಕನಾಗಿದ್ದಾಗ ನನಗೆ ಅವಕಾಶ ಕೊಟ್ಟೋರು ಕುಮಾರಣ್ಣಾ ಪಕ್ಷ ಬಿಡೋ ಮಾತೆ ಇಲ್ಲ ; ಶಾಸಕ ದೇವಾನಂದ ಚವ್ಹಾಣ... Vijayapur#JDSMLA....

ವಿಜಯಪುರ: ನಾನು ನಿರ್ಗತಿಕ ಆಗಿದ್ದ ವೇಳೆ, ಕುಮಾರಣ್ಣ ಅವರು ನನಗೆ ಅವಕಾಶ ಕೊಟ್ಟು ಬೆಳೆಸಿದ್ದಾರೆ, ನನ್ನನ್ನು ಮನೆ ಮಗನಂತೆ ನೋಡಿಕೊಳ್ತಿದ್ದಾರೆ. ನಾನು ಜೆಡಿಎಸ್ ಬಿಟ್ಟು ಎಲ್ಲೂ ಹೋಗಲ್ಲ, ಬಿಜೆಪಿ ಸೇರುವ ಮಾತೆ ಇಲ್ಲ


ನನಗೆ ಯಾರೂ ಬಿಜೆಪಿ ಮುಖಂಡರು ಮಾತನಾಡಿಲ್ಲ, ನಮ್ಮ ಸಮಾಜದ ಕೆಲ‌ ಮುಖಂಡರು ಮೊದಲಿನಿಂದಲೂ ಬಿಜೆಪಿ‌ ಸೇರುವಂತೆ ಹೇಳುತ್ತಿದ್ದರು, ಆಗ ನಾನು ಆಗ ನಯವಾಗಿ ತಿರಸ್ಕರಿಸಿದ್ದೇನೆ ಎಂದು ನಾಗಠಾಣ ಮೀಸಲು‌ ಮತಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಇಂದು ವಿಜಯಪುರದಲ್ಲಿ  ಮಾದ್ಯಮದವರನ್ನು ಉದ್ದೇಸಿಸಿ ಮಾತನಾಡಿದ ಶಾಸಕ ದೇವಾನಂದ ಚವ್ಹಾಣ, ನಾನು ಇವತ್ತು ಬೆಂಗಳೂರಿನಿಂದ ವಿಜಯಪುರಕ್ಕೆ ಬಂದೆ.


ಬಂದಾಗ ಎಲ್ಲರೂ ನನಗೆ ಕೇಳಿದ್ರು, ಆಗ ನನಗೆ ಆಶ್ಚರ್ಯ ಆಯ್ತು. ನಮ್ಮ‌ ರಾಜ್ಯ‌ ನಾಯಕರಾದ ಕುಮಾರಣ್ಣ, ಹೊರಟ್ಟಿ, ವಿಶ್ವನಾಥ ಸಾಹೇಬ್ರು ಎಲ್ಲರೂ ಸೇರಿ ಸರ್ಕಾರದ ಬಗ್ಗೆ ಚರ್ಚೆ ಮಾಡಿದ್ದೇವೆ, ಸರ್ಕಾರ ಐದು ವರ್ಷ ಇರಲಿದೆ, ಕುಮಾರಸ್ವಾಮಿ‌ ಅವರೇ ಸಿಎಂ ಆಗಿರ್ತಾರೆ, ಸಮ್ಮಿಶ್ರ ಸರ್ಕಾರ ಗಟ್ಟಿಯಾಗಿದೆ, ಇನ್ನೂ ನಾಲ್ಕು ವರ್ಷಗಳ ಕಾಲ ಸರ್ಕಾರ ನಡೆಯಲಿದೆ ಎಂದರು. ಇನ್ನು ಇದೇ ಸಂದರ್ಭದಲ್ಲಿ ಮಾತನಾಡುತ್ತಾ


ನಾನು ಜೆಡಿಎಸ್ ಪಕ್ಷ ಬಿಟ್ಟು ಎಲ್ಲೂ ಹೋಗಲ್ಲ, ಬಿಜೆಪಿ ಸೇರುವ ಮಾತೆ ಇಲ್ಲ. ನನಗೆ ಯಾರೂ ಬಿಜೆಪಿಗೆ ಬರುವಂತೆ ಮಾತನಾಡಿಲ್ಲ, ನಮ್ಮ ಸಮಾಜದ ಕೆಲ‌ ಮುಖಂಡರು ಬಿಜೆಪಿಗೆ ಸೇರುವಂತೆ ಆಗ ಹೇಳಿದ್ರು, ಅದನ್ನು ನಾನು ನಯವಾಗಿ ತಿರಸ್ಕರಿಸಿದ್ದೇನೆ.

ಇನ್ನು ವಿಜಯಪುರ ಲೋಕಸಭೆಯ ಮೈತ್ರೀ ಸರ್ಕಾರದ ಅಭ್ಯರ್ಥಿಯಾದ ಸುನೀತಾ ಚವ್ಹಾಣ ಸೋಲಿಗೆ ಯಾರೂ ಹೊಣೆಯಲ್ಲ. ಜನಾಭಿಪ್ರಾಯ ಹೇಗಿದೆಯೋ ಹಾಗೆ ಆಗಿದೆ, ಯಾರನ್ನೂ ದೂಷಿಸುವುದು ಸರಿಯಲ್ಲ, ಇನ್ನು ಇವಿಎಂ ಮಷೀನಗಳ ಬಗ್ಗೆ ನಮಗೆ ಒಂದಿಷ್ಟು ಸಂಶಯವಿದೆ ಹಾಗೆಂದ ಮಾತ್ರಕ್ಕೆ ನಾವು ಇದಕ್ಕೇನು ಮನವಿ ಮಾಡುವದಾಗಲೀ ಮಾಡಲ್ಲ ಎಂದರು...

Like our news?
Copyrights

BD1 News Kannada

This is BD1 News which covers News of Every Village To Entire World