ಬದಲಾವಣೆ ನಮ್ಮಿಂದಲೇ ಅಂತಾ ಹೇಳಿ ಡೀಲ್ ಮೇಲೆ ಫೋಕಸ್ ಮಾಡಿ ಅರೆಸ್ಟ್ ಆದ ಹೇಮಂತ್.... Focus Tv#MD Hemanth [email protected]

Sun, May 05, 2019

ಬೆಂಗಳೂರು : ಸಿಸಿಬಿ ನಡೆಗೆ ಪತರಗುಟ್ಟಿದ ಫೋಕಸ್ ಟೀಮ್ ಏನಪ್ಪಾ ಇದು ಅಂತೀರಾ ಮತ್ತೊಂದು ಬ್ಲಾಕ್‌ಮೇಲ್ ಪ್ರಕರಣಕ್ಕೆ ಮತ್ತೋರ್ವ ಪತ್ರಕರ್ತ ಅಂದರ್ ಆಗಿದ್ದಾನೆ. 


ಹೌದು ಸರದಿ ಸಾಲಿನಲ್ಲಿ ಸ್ಯಾಟಲೈಟ್ ಚಾನಲ್ಗಳಾದ ಪಬ್ಲಿಕ್, ಸುವರ್ಣ ವಾಹಿನಿಯ ವರದಿಗಾರರು ಈಗಾಗಲೇ  ಕಂಬಿ ಎಣಿಸುತ್ತಿರುವ ಬೆನ್ನಲ್ಲೇ ಈಗ ಫೋಕಸ್ ಟೀವಿ ಮುಖ್ಯಸ್ಥ ಹೇಮಂತ್ ತನ್ನ ಆಫೀಸ್ ನಲ್ಲೇ ಅರೆಸ್ಟ್ ಆಗಿ ಜೈಲು ಸೇರಿದ್ದಾನೆ. 

ಮಾಜಿ ಮಂತ್ರಿ ಅರವಿಂದ ಲಿಂಬಾವಳಿಗೆ ಸೀಡಿ ಬೆದರಿಕೆ  ಹಾಕಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದನಂತೆ ಈ ಪುಣ್ಯಾತ್ಮ ..

ಆದರೇ ನಸೀಬು ರಿವರ್ಸ್ ಹೊಡೆದು ಫೋಕಸ್ ಕಛೇರಿಯನ್ನೇ ತಲ್ಲಣ ಪಡಿಸಿದೆ ಮಿಸ್ಟರ್ ಲಿಂಬಾವಳಿ ನೀಡಿದ ಕಂಪ್ಲೇಂಟ್ ಮೇರೆಗೆ  ಫೋಕಸ್ ಮುಖ್ಯಸ್ಥ  ಹೇಮಂತ್ ಅರೆಸ್ಟ್  ಆಗಿದ್ದಾನೆ. ದುರಂತ ಏನಂದ್ರೆ  ಸಿಸಿಬಿ  ಪರಿಶೀಲನೆ  ವೇಳೆ  ಮಾಫಿಂಗ್ ಬಳಸಿ  ರಚಿಸಲಾಗಿರುವ ವಿವಿಧ  ರಾಜಕಾರಣಿಗಳ ಫೋಟೋ, ನಕಲಿ ಸೀಡಿಗಳು.ಕೂಡಾ ಪತ್ತೆಯಾಗಿವೆ. ಈ ಹಿಂದೆಯು ಆರೋಗ್ಯ ಸಚಿವ  ಶಿವಾನಂದ ಪಾಟೀಲ್ ರನ್ನು ಬ್ಲಾಕ್ ಮೇಲೆ ಮಾಡಿರುವ ವಿಚಾರ ಕೂಡ ಕೇಳಿ ಬಂದಿತ್ತು, ವಿಮೆನ್ ಜರ್ನಲಿಸಂ ಮುಂದಿಟ್ಟುಕೊಂಡು ಧಂಧೆಗೆ ಇಳಿದಿರುವ ಈತನ ಸೋಕಾಲ್ಡ್ ಫೋಕಸ್ ಜರ್ನಲಿಸಂಗೇ ತಕ್ಕ ಪಾಠ ಕಾನೂನು ಕಲಿಸಲಿ ಎಂಬುದೇ ನಿಷ್ಟಾವಂತ ಪತ್ರಕರ್ತರ ಆಗ್ರಹವಾಗಿದೆ.

Like our news?