ಹುಬ್ಬಳ್ಳಿ:ರಾಜ್ಯಪಾಲರ ಪ್ರತಿಕೃತ ದಹಿಸಿ ಪ್ರತಿಭಟನೆ

Thu, May 17, 2018

ಹುಬ್ಬಳ್ಳಿ: ಬಹುಮತವಿಲ್ಲದೇ ಬಿಜೆಪಿಗೆ ಪಕ್ಷಪಾತದಿಂದ ರಾಜ್ಯಪಾಲರು ಸರ್ಕಾರ ರರಾಜ್ಯಪಾಲರು ಸರ್ಕಾರ ರಚಿಸಲು ಅಹ್ವಾನ ನೀಡಿದನ್ನು ಖಂಡಿಸಿ‌ ಜೆಡಿಎಸ್ ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಮಾಡಿದ್ದಾರು. ನಗರದ ಬಸವ ವನದಿಂದ ಸಂಗೊಳ್ಳಿ ರಾಯಣ್ಣ ವೃತದವರೆಗೆ ಪ್ರತಿಭಟನೆ ರ್ಯಾಲಿ ನಡೆಸಿದ ನೂರಾರು ಕಾರ್ಯಕರ್ತರು ರಾಜ್ಯಪಾಲರ ಅಣಕು ಯಾತ್ರೆ ನಡೆಸಿ, ರಾಜ್ಯಪಾಲರಾದ ವಜುಭಾಯಿ ವಾಲಾ ಹಾಗೂ ನೂತನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ರ್ಯಾಲಿ ಮಾಡುತ್ತಾಬಂದ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ವೃತದಲ್ಲಿ‌ ರಾಜ್ಯಪಾಲರ  ಪ್ರತಿಕೃತಿ ದಹನ ಮಾಡಿ. ಹು-ಧಾ ಕೇಂದ್ರ ವಿಧಾನ ಸಭಾ ಕ್ಷೇತ್ರದ ಇವಿಎಮ್ ಯಂತ್ರಗಳಲ್ಲಿ ದೋಷವಿದ್ದು, ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರಕ್ಕೆ ಮರು ಚುನಾವಣೆ ನಡೆಸಬೇಕು ಎಂದು ಇದೇವೇಳೆ ಅಗ್ರಹಿಸಿ ಮುಂಬರುವ ಚುನಾವಣೆಯಲ್ಲಿ ಇವಿಎಂ ಮತ ಯಂತ್ರಗಳನ್ನು ನಿಷೇಧಿಸಬೇಕು ಎಂದು ಒತ್ತಾಯ ಮಾಡಿ ಹುಬ್ಬಳ್ಳಿಯ ತಹಶೀಲ್ದಾರ್ ಮುಖಾಂತರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದರು.

Like our news?