ಯಶಸ್ಸಿನ ತುತ್ತತುದಿಯಲ್ಲಿದ್ದ ಮದ್ಯದ ದೊರೆ ವಿಜಯ್ ಮಲ್ಯ ಈಗ ಪಾಪರ್....

Mon, May 14, 2018

ಹುಬ್ಬಳ್ಳಿ ಧಾರವಾಡ ---ಯಶಸ್ಸಿನ ತುತ್ತತುದಿಯಲ್ಲಿದ್ದ ಮದ್ಯದ ದೊರೆ ವಿಜಯ್ ಮಲ್ಯ ಈಗ ಪಾಪರ್ ಆಗಿ, ಮಾಡಿದ ಸಾಲ ತೀರಿಸಲಾಗದೆ ದೇಶ ಬಿಟ್ಟು ಹೋಗಿದ್ದಾರೆ. ಆದರೆ ಮಲ್ಯ ಐಶಾರಾಮಿ ಜೀವನ ಸಾರುವ ಮಲ್ಯಗೆ ಸೇರಿದ 2 ಕಾರುಗಳನ್ನು ಹುಬ್ಬಳ್ಳಿಯ ಉದ್ಯಮಿಯೊಬ್ಬರು ಆನ್‌ಲೈನ್ ಹರಾಜಿನಲ್ಲಿ ಕೊಂಡು ತಂದಿದ್ದು, ಆಕರ್ಷಣೀಯಾಗಿದೆ.ಹುಬ್ಬಳ್ಳಿಯ ಉದ್ಯಮಿ ಹನುಮಂತರೆಡ್ಡಿ ಮಲ್ಯಗೆ ಸೇರಿದ್ದ 2 ಕಾರುಗಳನ್ನು ಆನ್‌ಲೈನ್ ಹರಾಜಿನಲ್ಲಿ ಬರೀ 1 ಲಕ್ಷ 40 ಸಾವಿರ ರೂ. ಬೆಲೆಗೆ ಖರೀದಿಸಿದ್ದಾರೆ. ಗೋಕುಲ ರಸ್ತೆಯ ಮಂಜುನಾಥ ನಗರದ ನಿವಾಸಿ ಹನುಮಂತ ರೆಡ್ಡಿ, 2017ರ ಜನವರಿಯಲ್ಲಿ ಮುಂಬೈನಲ್ಲಿ ನಡೆದ ಆನ್‌ಲೈನ್ ಹರಾಜಿನಲ್ಲಿ 13 ಲಕ್ಷ 15 ಸಾವಿರ ಮೂಲ ಬೆಲೆಯ MH-01, DA-7227 ಸೋನಾಟಾ ಗೋಲ್ಡ್ ಹಾಗೂ 21 ಲಕ್ಷ ಮೂಲ ಬೆಲೆ ಇರುವ ಹೋಂಡಾ ಎಕಾರ್ಡ್ 2.4ಎಟಿ, MH-01 MA-1235 ನಂಬರ್ ಕಾರ್ ಪರ್ಚೇಸ್ ಮಾಡಿದ್ದಾರೆ. ಎರಡೂ ಕಾರುಗಳ ಮೂಲ ಬೆಲೆ ಸೇರಿದರೆ ಅಂದಾಜು 32 ಲಕ್ಷ ರೂ.ಗೂ ಅಧಿಕವಾಗುತ್ತೆ. ಆದರೆ, ಆನ್‌ಲೈನ್ ಹರಾಜಿನಲ್ಲಿ ಹನುಮಂತ ರೆಡ್ಡಿಗೆ ಬರೀ 1 ಲಕ್ಷ 40 ಸಾವಿರಕ್ಕೆ ಇವೆರಡೂ ಕಾರುಗಳು ಸಿಕ್ಕಿವೆ. ಹುಂಡೈ ಸೋನಾಟಾಗೆ ಬರೀ 40 ಸಾವಿರವಾದರೆ, ಹೊಂಡಾ ಎಕಾರ್ಡ್ ಕಾರಿಗೆ ಕೊಟ್ಟಿದ್ದು 1 ಲಕ್ಷ ರೂ. ವ್ಯಾಟ್ ಸೇರಿದರೆ 1 ಲಕ್ಷ 58 ಸಾವಿರದ 900 ರೂ. ಖರ್ಚಾಗದೆ  2002ರ ಮಾಡೆಲ್ ಹೊಂದಿದ ಹುಂಡೈ ಸೋನಾಟಾ ಗೋಲ್ಡ್ ಕಾರು ಒಂದು ಚೂರೂ ಮಾಸಿಲ್ಲ. ಉತ್ತಮ ಸ್ಥಿತಿಯಲ್ಲಿದೆ. ಹಾಗೇ ಹೊಂಡಾ ಎಕಾರ್ಡ್ 2003ರ ಮಾಡೆಲ್ ಸಹ ಹೊಸ ಕಾರಿನಂತೆಯೇ ಓಡುತ್ತೆ. ಹರಾಜಿನಲ್ಲಿ ಕೊಂಡು ತಂದ ಬಳಿಕ ಈ ಕಾರುಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಕೊಟ್ರೆ ಡಬಲ್ ರೇಟ್‌ಗೆ ಖರೀದಿಸೋದಾಗಿ ಎಷ್ಟೋ ಮಂದಿ ಹನುಮಂತರೆಡ್ಡಿಗೆ ಕೇಳಿದ್ದಾರಂತೆ. ಹುಂಡೈ ಸೋನಾಟಾ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆ ಬೆಲೆ ಎರಡೂವರೆ ಲಕ್ಷ. ಹೊಂಡಾ ಎಕಾರ್ಡ್ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯ ಸದ್ಯದ ಬೆಲೆ ನಾಲ್ಕೂವರೆ ಲಕ್ಷ. ಒಳ್ಳೇ ರೇಟ್ ಒಲಿದು ಬಂದ್ರೇ ಮಾರೋದಕ್ಕೆ ರೆಡಿ ಅಂತಿದಾರೆ ಹನುಮಂತರೆಡ್ಡಿ.

 ಇವರು ಪಾಲ್ಗೊಂಡಾಗ ಹರಾಜಿನಲ್ಲಿ 52 ವಾಹನಗಳಿದ್ದವು. ಇದರಲ್ಲಿ ರೋಲ್ಸ್ ರಾಯ್ಸ್‌ದಿಂದ ಹಿಡಿದು ಎಲ್ಲ ವಾಹನಗಳೂ ಒಳ್ಳೆ ಸ್ಥಿತಿಯಲ್ಲಿದ್ದವು. ಆದರೆ, ಅಂತಹ ದೊಡ್ಡ ಮೊತ್ತದ ವಾಹನಗಳು ಸಿಗಲಿಲ್ಲ. ಆದರೆ ಒಳ್ಳೆ ರನ್ನಿಂಗ್ ಕಂಡೀಷನ್‌ನಲ್ಲಿರುವ ಈ ಕಾರುಗಳು ಸಿಕ್ಕಿರೋದಕ್ಕೆ ಇವರಿಗೆ ಖುಷಿಯಾಗಿದೆ.


 
Like our news?
Copyrights

*