ವಯಸ್ಸಾದ ಯಡಿಯೂರಪ್ಪ ಯಾಕೆ ಸಿಎಂ ಅಭ್ಯರ್ಥಿ? ಸಂವಾದದಲ್ಲಿ ಸ್ಮೃತಿ ಇರಾನಿಗೆ ಯುವತಿ ಪ್ರಶ್ನೆ

Sat, Apr 28, 2018


ಬೆಳಗಾವಿ: ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತದೆ. ಆದರೇ ಬಿಜೆಪಿ ಯಾಕೆ ವಯಸ್ಸಾದ ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ ಎಂದು ಯುವತಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ನಗರದ ಕೆಎಲ್‍ಇ ಜಿರಿಗೆ ಭವವನದಲ್ಲಿ ನಡೆದ ಕರುನಾಡ ಜಾಗೃತಿ ಮಹಿಳಾ ಸಂವಾದದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಇಂತಹದೊಂದು ಪ್ರಶ್ನೆಯನ್ನು ಕೇಳಲಾಗಿದೆ. ಪ್ರಶ್ನೆಗೆ ಉತ್ತರಿಸಿದ ಸ್ಮೃತಿ ಇರಾನಿ, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಉದಾಹರಣೆ ನೀಡಿ ವಯಸ್ಸಿಗಿಂತ ಅನುಭವ ಮುಖ್ಯ ಅಂದ್ರು.

ಇದೇ ಸಂವಾದ ಕಾರ್ಯಕ್ರಮದಲ್ಲಿ ದೇಶದಲ್ಲಿ ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡುತ್ತೀರಿ ಆದರೇ ಎಂಟಿಎಂ ನಲ್ಲಿ ಹಣ ಕೊರತೆ ಉಂಟಾಗಿದೆ ಅಲ್ಲ ಇದಕ್ಕೆ ಎನಂತಿರಿ ಅಂತಾ ಪ್ರಶ್ನೆ ಕೇಳಲಾಯಿತು. ಎಟಿಎಂಗಳಲ್ಲಿ ಹಣವಿದ್ದು, ನೋಟ್ ಅಮಾನೀಕರಣದ ವೇಳೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಇನ್ನೂ ಕೆಲವರು ಕೃತಕ ಅಭಾವ ಸೃಷ್ಠಿಸಲು ಹೊರಟ್ಟಿದ್ದಾರೆ. ರಾಜಕಾರಣಿಗಳು ಹಣ ಹಂಚಿಕೆ ಮಾಡಲು ಹಣ ಸಂಗ್ರಹ ಮಾಡಿರುವ ಅನುಮಾನವಿದೆ ಅಂತಾ ತಿಳಿಸಿದ್ರು.

Like our news?