ಉಗ್ರಸಂಚಿತ ಕೃತ್ಯಕ್ಕೆ ಕಾರಣವಾಯ್ತಾ ಆಟೋ ಬ್ಲಾಸ್ಟ್ ಪ್ರಕರಣ.? ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದೇನು..!

Sun, Nov 20, 2022

ಮಂಗಳೂರು : ಆಟೋ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿ ಪ್ರವೀಣ್ ಸೂದ್  ಇದೊಂದು ಉಗ್ರಕೃತ್ಯ ಎಂದು ಹೇಳಿದ್ದಾರೆ...

ಹೌದು, ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದು ಅನಿರೀಕ್ಷಿತವಾಗಿ ನಡೆದ ಸ್ಫೋಟವಲ್ಲ. ಇದೊಂದು ಉಗ್ರ ಕೃತ್ಯ. ಉದ್ದೇಶಪೂರ್ವಕವಾಗಿ ಸಾವು ನೋವು, ಹಾನಿ ಉಂಟು ಮಾಡಲು ಮಾಡಿದ್ದ ಪ್ಲಾನ್ ಎಂದು ಹೇಳಿದ್ದಾರೆ...


ನಿನ್ನೆ ಸಂಜೆ 5:30ರ ಸುಮಾರಿಗೆ ಗರೋಡಿ ಬಳಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪರಿಣಾಮ ಅದರ ಚಾಲಕ ಮತ್ತು ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದರು. ಪ್ರಯಾಣಿಕನ ಬ್ಯಾಗಿನಲ್ಲಿ ಇದ್ದ ವಸ್ತುವಿನಿಂದ ಬೆಂಕಿ ಕಾಣಿಸಿದೆ ಎಂದು  ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ನಿನ್ನೆ ತಿಳಿಸಿದ್ದರು;ಇದೀಗ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು, ಇದು ಉಗ್ರ ಕೃತ್ಯ ಕರ್ನಾಟಕ ಪೊಲೀಸರಿಂದ ಸೂಕ್ಷ್ಮವಾಗಿ, ಆಳವಾಗಿ ತನಿಖೆ ನಡೆಸಲಾಗುತ್ತಿದೆ. ಕೇಂದ್ರದ ತನಿಖಾ ಸಂಸ್ಥೆಗಳ ಜೊತೆ ತನಿಖೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ...

Like our news?