ಕಾಡಾನೆ ಅಟ್ಟಹಾಸ : ರೈತಮಹಿಳೆ ಸಾವು..!

Sun, Nov 20, 2022

ಚಿಕ್ಕಮಗಳೂರು : ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ... 

ಹೌದು, ಮೂಡಿಗೆರೆ ತಾಲ್ಲೂಕಿನ  ಕುಂದೂರು ಗ್ರಾಮದ  ಸತೀಶ್ ಗೌಡರ ಪತ್ನಿ, 45 ವರ್ಷದ ಶೋಭ ಎಂಬ ರೈತ ಮಹಿಳೆ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ..‌  


ಬೆಳಗ್ಗಿನ ಜಾವ  ಹುಲ್ಲು ಕುಯ್ಯಲು ತೆರಳಿದ್ದಾಗ ಸಾರ್ವಜನಿಕರು ತಿರುಗಾಡುವ ರಸ್ತೆಯ ಸಮೀಪದಲ್ಲೇ ಕಾಡಾನೆ ದಾಳಿ ನಡೆಸಿದೆ ಎನ್ನಲಾಗಿದೆ.. ಮಲೆನಾಡಿನ ಜಾಗದಲ್ಲಿ ಕಾಡಾನೆಗಳ ಉಪಟಳಕ್ಕೆ ಸರಣಿ ಸಾವುಗಳು ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕೈಕಟ್ಟಿ ಕುಳಿತಿರುವುದು ದುರ್ದೈವದ ಸಂಗತಿ ಇನ್ನಾದರು ಅರಣ್ಯ ಇಲಾಖೆ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಪ್ರಾಣಹಾನಿಯ ಪ್ರಮಾಣ ತಗ್ಗಿಸಬೇಕೆಂಬುದೇ  ಸಾರ್ವಜನಿಕರ ಕಳಕಳಿ...

Like our news?