ಕನ್ನಡಕ್ಕೆ ಆಪತ್ತು ಬಂದಿಲ್ಲ , ಮುಂದೆಯೂ ಬರುವುದಿಲ್ಲ : ಬಸವರಾಜ ಬೊಮ್ಮಾಯಿ..!

Sat, Nov 19, 2022

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ಅನಾವರಣಗೊಳಿಸಿದರು..


ಹೌದು, ಬೆಂಗಳೂರಿನ ಸ್ತಪತಿ ಕ್ರಿಯೇಷನ್ಸ್‌ನ ಕಲಾವಿದ ಎನ್. ಶಿವದತ್ತ ಅವರು ಭುವನೇಶ್ವರಿ ಪ್ರತಿಮೆಯನ್ನು ನಿರ್ಮಿಸಿದ್ದು, ಪ್ರತಿಮೆ ಆರು ಕಾಲು ಅಡಿ ಎತ್ತರವಿದೆ.. ಬಳಿಕ ಮಾತನಾಡಿದ ಸಿಎಂ, ಕನ್ನಡಕ್ಕೆ ಎಂದೂ ಆಪತ್ತು ಬಂದಿಲ್ಲ, ಮುಂದೆಯೂ ಬರುವುದಿಲ್ಲ. ಈ ಜಗತ್ತಿನಲ್ಲಿ ಸೂರ್ಯ, ಚಂದ್ರರು ಎಲ್ಲಿಯವರೆಗೂ ಇರುತ್ತಾರೋ, ಅಲ್ಲಿಯವರೆಗೆ ಕನ್ನಡ ಭಾಷೆ ಸಹ ಇರುತ್ತದೆ. ಒಬ್ಬ ಕನ್ನಡ ಭಾಷೆಯ ಪ್ರೇಮಿಯಾಗಿ, ಹೆಮ್ಮೆಯ ಕನ್ನಡಿಗನಾಗಿ ನಾನು ಈ ಮಾತನ್ನು ಅತ್ಯಂತ ಗರ್ವದಿಂದ ಹೇಳುತ್ತೇನೆ ಎಂದರು..

ಕನ್ನಡ ಅತ್ಯಂತ ಪ್ರಾಚೀನವಾದ, ಇತಿಹಾಸ ಹೊಂದಿದ ಭಾಷೆ. ಬದುಕಿಗೆ ಅತ್ಯಂತ ಹತ್ತಿರವಾಗುವ ಹಾಗೂ ಪ್ರಪಂಚದ ಇನ್ನ್ಯಾವುದೇ ಭಾಷೆಗಳಲ್ಲಿ ವ್ಯಕ್ತಪಡಿಸಲಾಗದ ಭಾವನೆಗಳನ್ನು ಕನ್ನಡದಲ್ಲಿ ವ್ಯಕ್ತಪಡಿಸಲು ಸಾಧ್ಯವಾದ ಕಾರಣ, ಕನ್ನಡ ಭಾಷೆ ಜಗತ್ತಿನ ಶ್ರೀಮಂತ ಭಾಷೆಯಾಗಿ ಹೊರಹೊಮ್ಮಿದೆ ಎಂದರು...

Like our news?