ಚಿಕ್ಕಮಗಳೂರು ಜಿಲ್ಲಾಮಟ್ಟದ ಕ್ರೀಡಾಕೂಟ : ರಾಜ್ಯಮಟ್ಟಕ್ಕೆ ಆಯ್ಕೆಯಾದ ಗ್ರಾಮೀಣ ಯುವ ಪ್ರತಿಭೆಗಳು..!

Thu, Sep 29, 2022

ಕಾಫಿನಾಡು ಯುವ ಪ್ರತಿಭೆಗಳ ಆಗರ ಎಂದರೆ ತಪ್ಪಾಗಲಾರದು ಎಷ್ಟೋ ಗ್ರಾಮೀಣ ಪ್ರತಿಭೆಗಳು ರೂಪತಳೆಯುವುದು ಪಠ್ಯೇತರ  ಚಟುವಟಿಕೆಗಳಲ್ಲೇ ಇದಕ್ಕೆ ಉದಾಹರಣೆಯಾಗಿ  ನಿಂತಿರುವುದು ಮೂಡಿಗೆರೆಯ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನೀಯರು...

ಹೌದು, ಇತ್ತೀಚೆಗಷ್ಟೇ ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ  ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ  ಮೂಡಿಗೆರೆಯ  ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಮೂಡಿಸಿದ ಪ್ರತಿಭೆಯ ಛಾಪು ಮೈನವಿರೇಳಿಸುತ್ತದೆ...


ಒಂದೆಡೆ ಸರ್ಕಾರಿ ಕಾಲೇಜಿನ ಗ್ರಾಮೀಣ ಯುವ ಪ್ರತಿಭೆಗಳ ಪ್ರದರ್ಶನ  ಖಾಸಗಿ ಕಾಲೇಜುಗಳ ಉಬ್ಬೇರುವಂತೆ ಮಾಡಿದರೆ ; ಮತ್ತೊಂದೆಡೆ  ನಾವ್ಯಾರಿಗಿಂತಲೂ ಕಡಿಮೆ ಇಲ್ಲ ಎಂಬ  ತೇಜೋಶಕ್ತಿ ಕ್ರೀಡಾಳುಗಳ ಆಟದಲ್ಲಿ ಬಿತ್ತರವಾಗುತ್ತಿತ್ತು...

ಈಗಾಗಲೇ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಐತಿಹಾಸಿಕವಾಗಿ ತಂಡೋಪಾದಿಯಲ್ಲಿ  ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಇಡೀ ಜಿಲ್ಲೆಗೆ ಕಿರೀಟಪ್ರಾಯ ವಿಷಯ...


ಗುಂಪು ಆಟಗಳಲ್ಲಿ ;

ಬಾಲಕರ  ಖೋ ಖೋ ತಂಡ, ವಾಲಿಬಾಲ್ ತಂಡ ಪ್ರಥಮ ಸ್ಥಾನ, ಮತ್ತು ಬಾಲಕಿಯರ ವಿಭಾಗಲ್ಲಿ  ಖೋ ಖೋ,ಕಬಡ್ಡಿ ತಂಡ ಪ್ರಥಮ ಸ್ಥಾನ ಹಾಗು ಬಾಲಕಿಯರ ರಿಲೇ ತಂಡ 4×100 ಮೀಟರ್ಸ್ ನಲ್ಲಿ ಪ್ರಥಮ ಸ್ಥಾನ, ಬಾಲಕರ ರಿಲೇ ತಂಡ 4×100 ಮೀ ಮತ್ತು 4×400 ಮೀ ನಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ...


ವೈಯಕ್ತಿಕವಾಗಿ  ಟೆನ್ನಿಕಾಯಿಟ್ ನಲ್ಲಿ ಮೊಹಮ್ಮದ್  ಆವೇಜ಼್ , ಫುಟ್ಬಾಲ್ ಆಟದಲ್ಲಿ ರವಿತೇಜ  ಮತ್ತು ಅಥ್ಲೆಟಿಕ್ಸ್ ಕ್ರೀಡೆಗಳಲ್ಲಿ ಪ್ರಜ್ವಲ್ H V, 100ಮೀಟರ್ಸ್, 200ಮೀಟರ್ಸ್, 110 ಮೀಟರ್ಸ್ ಹರ್ಡಲ್ಸ್ ನಲ್ಲಿ ಪ್ರಥಮ, ಪ್ರಶಾಂತ್ 100 ಮೀಟರ್ಸ್ ದ್ವಿತೀಯ  ಮತ್ತು  ಉದ್ದ ಜಿಗಿತದಲ್ಲಿ ಪ್ರಥಮ ,ಜೆನಿತಾ ರೊಡ್ರಿಗಸ್ 200ಮೀ,  400 ಮೀಟರ್ಸ್ ನಲ್ಲಿ ಪ್ರಥಮ. ಚಂದನ 800ಮೀ,1500ಮೀಟರ್ಸ್ ನಲ್ಲಿ ಪ್ರಥಮ,ಅಪೂರ್ವ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಐತಿಹಾಸಿಕ ಗೆಲುವಿನ ರೂವಾರಿಗಳಾಗಿದ್ದಾರೆ...


ಒಟ್ಟಾರೆಯಾಗಿ ಗ್ರಾಮೀಯ ಮಟ್ಟದಲ್ಲಿ ಹಲವು   ಸವಾಲುಗಳನ್ನು ಎದುರಿಸಿ ಪ್ರತಿಭಾನುವರಣ ಮಾಡಿರುವ ಯುವ ಪ್ರತಿಭೆಗಳ ಉಜ್ವಲ ಭವಿಷ್ಯಕ್ಕೆ  ನಮ್ಮದೊಂದು ಶುಭಹಾರೈಕೆ ಇರಲಿ...

Like our news?