ನವರಾತ್ರಿ ಹಿನ್ನಲೆ - ಹಳದಿ ವರ್ಣದ ಉಡುಪಿನಲ್ಲಿ ಮಿಂಚಿದ ಶಾಲಾ ಶಿಕ್ಷಕಿಯರು..!

Thu, Sep 29, 2022

ವಿಜಯಪುರ : ನವರಾತ್ರಿ ಹಬ್ಬದ ಹಿನ್ನಲೆಯಲ್ಲಿ  ಶಾಲಾ ಶಿಕ್ಷಕಿಯರು  ಏಕ ವರ್ಣ ಉಡುಪಿನಲ್ಲಿ ನವರಾತ್ರಿಯ ಹಬ್ಬವನ್ನು ಸಂಭ್ರಮಿಸಿದ್ದಾರೆ...


ಹೌದು ಇಂದು ವಿಜಯಪುರ ನಗರದ ಗುರುದೇವ ಇಂಟರ್ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಹಳದಿ ಬಣ್ಣದಲ್ಲಿ ಶಾಲೆಯ ಎಲ್ಲಾ ಮಹಿಳಾ ಶಿಕ್ಷಕಿಯರು ಕಂಗೊಳಿಸಿದರು. ಇನ್ನೂ ಹಳದಿ ಬಣ್ಣವು ಆಶಾವಾದ ಮತ್ತು ಸಂತೋಷಕ್ಕೆ ಹೆಸರುವಾಸಿ , ಅದರಲ್ಲೂ ಮುತ್ತೈದೆಯರಿಗೆ ಅರಿಶಿಣ ಕುಂಕುಮ ನೀಡಿ ಗೌರವಿಸುವ ಸಂಪ್ರದಾಯ ನಮ್ಮ ದೇಶದ ಸಂಸ್ಕೃತಿ ಇಂದು ನವರಾತ್ರಿಯ ನಾಲ್ಕನೇ ದಿನಕ್ಕೆ ಎಲ್ಲಾ ಮಹಿಳೆಯರು ಹಳದಿ ವರ್ಣದ ಸೀರೆ ಧರಿಸಿ ನವರಾತ್ರಿ ಆಚರಿಸುವ ಮೂಲಕ ಮಕ್ಕಳಿಗೆ ಒಗ್ಗಟ್ಟು , ನಮ್ಮ ಸಂಸ್ಕೃತಿ ,ಸಂಪ್ರದಾಯ ಆಚರಣೆಯ ಕುರಿತು ಜಾಗೃತಿ ಮೂಡಿಸುವ ಮೂಲಕ ಹಬ್ಬದ ಆಚರಣೆ ಮಾಡುವ ಮೂಲಕ ಮಾದರಿಯಾಗಿದ್ದಾರೆ...

Like our news?