ಹೀಗೆ ಬಿಟ್ಟರೆ ಕಾಂಡೋಮ್ ಕೂಡ ಕೇಳುತ್ತೀರಾ ? ವಿದ್ಯಾರ್ಥಿನಿ ಪ್ರಶ್ನೆಗೆ ವ್ಯಂಗವಾಗಿ ಉತ್ತರಿಸಿದ IAS ಅಧಿಕಾರಿ..!

Thu, Sep 29, 2022

ಬಿಹಾರ : ಪಾಟ್ನಾದಲ್ಲಿ ನಡೆದ ಯುನಿಸೆಫ್ ಮತ್ತು ರಾಜ್ಯ ಸರ್ಕಾರವು ಜಂಟಿಯಾಗಿ ಆಯೋಜಿಸಿದ ‘ಸಶಕ್ತ್ ಬೇಟಿ, ಸಮ್ರದ್ದ್ ಬಿಹಾರ’ ಎಂಬ ಕಾರ್ಯಗಾರದಲ್ಲಿ  ಬಿಹಾರದ ಮಹಿಳಾ ಅಭಿವೃದ್ಧಿ ನಿಗಮ (ಡಬ್ಲ್ಯುಡಿಸಿ) ವ್ಯವಸ್ಥಾಪಕ ನಿರ್ದೇಶಕಿ ಹರ್ಜೋತ್‌ ಕೌರ್ ಬಾಮ್ಹ್ರಾ ನೀಡಿದ ಉದ್ಧಟತನದ ಉತ್ತರಕ್ಕೆ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ...


ಇದನ್ನು ಓದಿ :-ಪಿಎಸ್ಸೈ ಹಗರಣದ ಆರೋಪಿ ಅಮೃತ್ ಪೌಲ್ ವಿರುದ್ಧ 1,406 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ..!

ಹೌದು, ‘ಸಶಕ್ತ್ ಬೇಟಿ, ಸಮ್ರದ್ದ್ ಬಿಹಾರ’ ಎಂಬ ಕಾರ್ಯಗಾರದಲ್ಲಿ ಓರ್ವ ವಿದ್ಯಾರ್ಥಿನಿ ಸರ್ಕಾರ ಸ್ಯಾನಿಟರಿ ಪ್ಯಾಡ್ ಯಾಕೆ ನೀಡುತ್ತಿಲ್ಲ ಎಂದು  ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಿರಿಯ ಐಎಎಸ್ ಅಧಿಕಾರಿ ಹರ್ಜೋತ್‌ ಕೌರ್, “ಇವತ್ತು ನೀವು ಸ್ಯಾನಿಟರಿ ಪ್ಯಾಡ್‌ ಕೇಳುತ್ತೀರಿ, ನಾಳೆ ಜೀನ್ಸ್ ಕೇಳುತ್ತೀರಿ, ಆನಂತರ ಉತ್ತಮ ಬೂಟುಗಳು ಮತ್ತು ಅಂತಿಮವಾಗಿ ಕುಟುಂಬ ಯೋಜನೆಗಾಗಿ ನಿರೋಧ್‌‌ಗಳನ್ನು ಕೂಡಾ ಕೇಳುತ್ತೀರಿ” ಎಂದು ಹೇಳಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ವ್ಯಾಪಕ ಟೀಕೆಗೂ ಗುರಿಯಾಗಿದೆ...

Like our news?