ಪಿಎಸ್ಸೈ ಹಗರಣದ ಆರೋಪಿ ಅಮೃತ್ ಪೌಲ್ ವಿರುದ್ಧ 1,406 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ..!

Thu, Sep 29, 2022

ಬೆಂಗಳೂರು : ಪಿಎಸ್ಸೈ ನೇಮಕಾತಿ ಪರೀಕ್ಷೆಯ ಅಕ್ರಮದ ಆರೋಪಿ ಐಪಿಎಸ್ ಅಧಿಕಾರಿ ಅಮೃತ್ ಪೌಲ್  ವಿರುದ್ಧ ಸಿಐಡಿ ಹೆಚ್ಚುವರಿ 1,406 ಪುಟಗಳ ಆರೋಪ ಪಟ್ಟಿಯನ್ನು 1ನೆ ಎಸಿಎಂಎಂ ಕೋರ್ಟ್ ಗೆ ಸಲ್ಲಿಸಿದೆ...


ಹೌದು, ಅಮೃತ್ ಪೌಲ್, ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ವೇಳೆಯಲ್ಲಿ ಹಣದ ವರ್ಗಾವಣೆ, ಅಕ್ರಮದಲ್ಲಿ ಅವರ ಪಾತ್ರ, ಅಭ್ಯರ್ಥಿಗಳಿಂದ ಪಡೆದ ಹಣದಿಂದ ಆಸ್ತಿ ಖರೀದಿಸಿರುವ ಮಾಹಿತಿ ಸೇರಿದಂತೆ ; 38 ಸಾಕ್ಷಿದಾರರ ಹೇಳಿಕೆಗಳನ್ನು ಸಂಗ್ರಹಿಸಿ ತನಿಖೆ ಪೂರ್ಣಗೊಳಿಸಿರುವ ತನಿಖಾ ತಂಡವು 78 ದಾಖಲೆಗಳ ಸಹಿತ ಆರೋಪ ಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದೆ...

ಓದಿ :- ನೂತನ CDS ಆಗಿ ಅನಿಲ್ ಚೌಹಾಣ್ ನೇಮಕ..!

Like our news?