RSS ದೇಶ ಭಕ್ತರನ್ನು ತಯಾರಿಸುವ ಕಾರ್ಖಾನೆ ; ಉನ್ನತ ಸ್ಥಾನದಲ್ಲಿರುವರೆಲ್ಲ RSS ನಿಂದ ಬಂದವರೇ - ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ..!

Wed, Sep 28, 2022

ವಿಜಯಪುರ : RSS ದೇಶ ಭಕ್ತರನ್ನು ತಯಾರಿಸುವ ಕಾರ್ಖಾನೆ , RSS ಎಂದು ಯಾವುದೇ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲಾ ಎಂದು RSS ಕುರಿತು ಬ್ಯಾನ್ ಗೆ ಆಗ್ರಹಿಸುತ್ತಿರುವರಿಗೆ  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಟಾಂಗ್ ನೀಡಿದರು...


ಹೌದು ಇಂದು ವಿಜಯಪುರ ನಗರದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ RSS ದೇಶ ಭಕ್ತರನ್ನು ತಯಾರಿಸುವ ಕಾರ್ಖಾನೆ RSS ಎಂದು ಯಾವುದೇ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲಾ ಮದ್ದುಗುಂಡು ದೇಶ ವಿರೋಧಿ ಚಟುವಟಿಕೆ ಮಾಡಿಲ್ಲಾ , ಯಾವುದೇ ಧರ್ಮದ ಮೇಲೆ ಪ್ರಹಾರ ಮಾಡಿಲ್ಲ , ನಮ್ಮ RSS  ದೇಶ ಭಕ್ತರ ಸಂಘಟನೆಯಾದೆ , ಈ ಹಿಂದೆ  ಸಾಕಷ್ಟು ಬಾರಿ ಚರ್ಚೆಯಾಗಿದೆ ಸುಪ್ರೀಂಕೋರ್ಟ್ನಲ್ಲೇ RSS ನ ಮೇಲಿರುವ ಹಿಂಪಡೆಯಲಾಗಿದೆ.  ಈ ಹಿಂದೆ ಸರದಾರ ವಲ್ಲಭಭಾಯಿ ಪಟೇಲರ ಕಾಲದಲ್ಲೀಯೂ ಸಹ  RSS ಗೆ ಯಾವುದೇ ದೇಶವಿರೋಧಿ ಚಟುವಟಿಕೆ ಕುರಿತು ಕೆಟ್ಟ ಹೆಸರಿಲ್ಲ , RSS ದೇಶ ಭಕ್ತರ ಸಂಘಟನೆ , ದೇಶದಲ್ಲಿ ಉನ್ನತ ಸ್ಥಾನದಲ್ಲಿರುವ ಎಲ್ಲರೂ RSS ಸಂಘಟನೆಯಿಂದ ಬಂದವರು ಎಂದು ತಿಳಿಸಿದರು...

Like our news?