ಗಂಟೆಗಟ್ಟಲೆ ಕಾದು ಸಾಲಿನಿಲ್ಲಿ ನಿಂತು ಮತದಾನ ಮಾಡಿದ ಯದುವೀರ್ ಒಡೆಯರ್...

Sat, May 12, 2018

ರಾಜ್ಯಾದ್ಯಂತ ಇಂದು ಬೆಳಿಗ್ಗೆಯಿಂದಲೇ ಮತದಾನ ಬಿರುಸಿನಿಂದ ಸಾಗುತ್ತಿದೆ.ರಾಜ್ಯಾದ್ಯಂತ ಘಟಾನುಘಟಿ ನಾಯಕರು ಬೆಳಿಗ್ಗೆಯಿಂದಲೇ ಮತದಾನ ನಡೆಸಿದ್ದಾರೆ.ಹಲವೆಡೆ ವಯಸ್ಸಾದ ವೃಧ್ದರು ಸಹ ಬೆಳ್ಳಂಬೆಳಿಗ್ಗೆಯೇ ಮತದಾನ ಮಾಡಲು ಉತ್ಸುಕರಾಗಿ ಮತಗಟ್ಟೆ ಬಳಿ ಬರುತ್ತಿದ್ದಾರೆ.ಹಲವೆಡೆ ಮಳೆಯ ಮಧ್ಯಯೂ ಮತದಾನ ಉತ್ತಮವಾಗಿ ನಡೆದಿದೆ.                ಮೈಸೂರಿನ ಮತಗಟ್ಟೆಯಲ್ಲಿ ಮೈಸೂರಿನ ಯುವರಾಜರಾದ ಯದುವೀರ ಕೃಷ್ಣದತ್ತ ಒಡೆಯರ್ ಅವರು ಸುಮಾರು 45 ನಿಮಿಷಗಳ ಕಾಲ ಸರತಿ ಸಾಲಿನಲ್ಲಿ ನಿಂತು ಕಾದು ಮತದಾನ ಮಾಡಿದರು.ಮೈಸೂರಿನಲ್ಲಿ ಮುಂಜಾನೆಯೆ ಮತಚಲಾಯಿಸಿದ ಯಧುವೀರ್.

ಕೆ.ಆರ್.ವಿಧಾನಸಭಾ ಕ್ಷೇತ್ರದ ಶ್ರೀಕಾಂತ ಶಾಲೆಯಲ್ಲಿ ಮತ ಹಾಕಿದ ರಾಜವಂಶಸ್ಥ. ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಯದುವೀರ್ ಕೃಷ್ಣದತ್ತ ಒಡೆಯರ್ ಅವರು ನಂತರ ಮಾತನಾಡಿ ಮತದಾನ ನಮ್ಮೆಲ್ಲರ ಹಕ್ಕು ನಮ್ಮ ಕ್ಷೇತ್ರದ ಎಲ್ಲ ನಾಗರೀಕರಂತೇ ನಾನು ಒಬ್ಬ.ನನ್ನ ಹಕ್ಕು ಚಲಾಯಿಸುವುದು ನನ್ನ ಕರ್ತವ್ಯ. ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್...

Like our news?